ರಾಜ್ಯ

ಸಿಬಿಎಸ್ಇ 10ನೇ ತರಗತಿ ಫಲಿತಾಂಶ: ರಾಜ್ಯದಲ್ಲಿ ಶೇ.98 ರಷ್ಟು ವಿದ್ಯಾರ್ಥಿಗಳು ಪಾಸ್

Manjula VN

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ನಡೆಸಿದ್ದ 10ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗಿದ್ದು, ಶೇ.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಒಟ್ಟಾರೆ ಶೇ.91.46ರಷ್ಟು ಫಲಿತಾಂಶ ಬಂದಿದ್ದು. ಇದು ಹಿಂದಿನ ವರ್ಷಕ್ಕಿಂತ ಶೇ.0.36ರಷ್ಟು ಹೆಚ್ಚಾಗಿದೆ. ಈ ಬಾರಿ ಶೇ.93.31ರಷ್ಟು ಫಲಿತಾಂಶದೊಂದಿಗೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 

ಬಾಲಕರ ಫಲಿತಾಂಶ ಪ್ರಮಾಣ ಶೇ.90.14 ರಷ್ಟಿದೆ. ಈ ಬಾರಿ ದೇಶದ್ಯಂತ ಕೊರೋನಾ ಆವರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮೆರಿಟ್ ಪಟ್ಟಿಯನ್ನು ಸಿಬಿಎಸ್ಇ ಪ್ರಕಟಿಸಿಲ್ಲ. 

ಈ ವರ್ಷ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಪೈಕಿ 1.84 ಲಕ್ಷ ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು 41000 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಇನ್ನು ವಲಯವಾರು ಫಲಿತಾಂಶದಲ್ಲಿ ತಿರುವನಂತಪುರ ವಲಯ ಶೇ.99.28ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿ ಮತ್ತು ಶೇ.79.12ರಷ್ಟು ಫಲಿತಾಂಶದೊಂದಿಗೆ ಗುವಾಹಟಿ ವಲಯ ಕಡೆಯ ಸ್ಥಾನದಲ್ಲಿದೆ. ಸೋಮವಾರ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟಿಸಿತ್ತು. 

SCROLL FOR NEXT