ಕೆಎಸ್ ಆರ್ ಟಿಸಿ ಚಾಲಕ 
ರಾಜ್ಯ

ಕರ್ತವ್ಯಕ್ಕೆ ಹಾಜರಾಗಲು 30 ಕಿ.ಮೀ. ಸೈಕಲ್ ತುಳಿಯುವ ಚಾಲಕ ಕಂ ನಿರ್ವಾಹಕ!

ಕೊರೊನಾದ ಈ ಕಾಲದಲ್ಲಿ ಎಷ್ಟೋ ಜನ ನೌಕರರು ತಮ್ಮ ಮನೆಯಿಂದ ಕಚೇರಿ ತಲುಪಲು ಬಸ್ ಇಲ್ಲ ಎನ್ನುವ ಕಾರಣಕ್ಕೆ ಕೆಲಸಕ್ಕೆ ಹಾಜರಾಗಲ್ಲ. ಇಂಥವರ ಮಧ್ಯೆ ಯಲಬುರ್ಗಾ ಕೆಎಸ್ಆರ್‌ಟಿಸಿ ಘಟಕದ ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್. 30 ಕಿಮೀ ಸೈಕಲ್ ತುಳಿದು ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಕೊಪ್ಪಳ: ಕೊರೊನಾದ ಈ ಕಾಲದಲ್ಲಿ ಎಷ್ಟೋ ಜನ ನೌಕರರು ತಮ್ಮ ಮನೆಯಿಂದ ಕಚೇರಿ ತಲುಪಲು ಬಸ್ ಇಲ್ಲ ಎನ್ನುವ ಕಾರಣಕ್ಕೆ ಕೆಲಸಕ್ಕೆ ಹಾಜರಾಗಲ್ಲ. ಇಂಥವರ ಮಧ್ಯೆ ಯಲಬುರ್ಗಾ ಕೆಎಸ್ಆರ್‌ಟಿಸಿ ಘಟಕದ ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್. 30 ಕಿಮೀ ಸೈಕಲ್ ತುಳಿದು ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ನೀಲಪ್ಪ ಯಲಬುರ್ಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರೂ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಮನೆ ಹೊಂದಿದ್ದು, ನಿಡಗುಂದಿಯಿಂದ ಯಲಬುರ್ಗಾಕ್ಕೆ ಸೈಕಲ್ ಹೊಡೆದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. 

ಗ್ರಾಮೀಣ ಭಾಗಗಳಲ್ಲಿ ಸದ್ಯ ಸಾರಿಗೆ ಸೌಕರ್ಯ ಅಷ್ಟಾಗಿ ಇಲ್ಲ. ಖಾಸಗಿ ವಾಹನಗಳ ಸಂಚಾರವೂ ವಿರಳವಾಗಿದೆ. ಹಾಗಾಗಿ ಸೈಕಲ್ ಸವಾರಿ ಅನಿವಾರ್ಯ. ಇದರಿಂದ ಕಳೆದುಕೊಳ್ಳುವಂಥದ್ದು ಏನಿಲ್ಲ‌, ಬದಲಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಹಗಲಿರುವಾಗಲೇ ಡ್ಯೂಟಿ ಮುಗಿದರೆ ಸೈಕಲ್ ಮೂಲಕ ಮರಳಿ ಮನೆ ಸೇರಲು ಅನುಕೂಲವಾಗಬಹುದು. ಇಂಥ ಸಿಬ್ಬಂದಿ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ, ಪ್ರೋತ್ಸಾಹ ನೀಡಲಿ.

ಈ ಕುರಿತು ಯಲಬುರ್ಗಾ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ರಮೇಶ್ ಜಿಂಗ್ಲಿ ಮಾತನಾಡಿ, ಇಂಥ ನೌಕರರು ನಮ್ಮಲ್ಲಿರುವುದು ನಿಜಕ್ಕೂ ಹೆಮ್ಮೆ. ನೀಲಪ್ಪನವರ ಕರ್ತವ್ಯಪ್ರಜ್ಞೆಯನ್ನು ಅಭಿನಂದಿಸುತ್ತೇವೆ ಎಂದರು.

ವರದಿ: ಬಸವರಾಜ ಕರುಗಲ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT