ರಾಜ್ಯ

ರೋಗ ಲಕ್ಷಣವಿಲ್ಲದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಂದ ಬಿಡುಗಡೆ, ನಾಳೆ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ: ಆರ್. ಅಶೋಕ್

Nagaraja AB

ಬೆಂಗಳೂರು: ಕೋವಿಡ್-19 ರೋಗ ಲಕ್ಷಣವಿಲ್ಲದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ, ಕೂಡಲೇ ಇಂತಹ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು,ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು  ಆದೇಶ ಹೊರಡಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರು ಉಸ್ತುವಾರಿಗಳ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರೋಗಲಕ್ಷಣ ಇಲ್ಲದ ಕೊರೋನಾ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡ ಲಾಗುತ್ತಿದೆ.ಅದೂ ಪ್ಯಾಕೇಜ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆ ಗಳು ಸರ್ಕಾರಕ್ಕೆ ನೀಡಬೇಕಾದ 5000 ಬೆಡ್ ಗಳನ್ನು ಕೊಡಲೇ ನೀಡಬೇಕು. ಖಾಸಗಿ ಆಸ್ಪತ್ರೆಯವರು ಹಲವು ಸಬೂಬು ಹೇಳಿಕೊಂಡು ಸರ್ಕಾರಕ್ಕೆ ಬೆಡ್ ಗಳನ್ನು ನೀಡದೆ ಸಮಸ್ಯ ಉಂಟು ಮಾಡುತ್ತಿದ್ದಾರೆ. ಈ ಹಿಂದೆ ಖಾಸಗಿ ಆಸ್ಪತ್ರೆಯವರು ಬೆಡ್ ಕೊಡುವುದಾಗಿ ಹೇಳಿದ್ದರು ಆದರೆ ಸಮರ್ಪಕವಾಗಿ ಬೆಡ್ ಗಳು ಸಿಕ್ಕಿಲ್ಲ ಹಾಗಾಗಿ ಅವರೊಂದಿಗೆ ಸಭೆ ನಡೆಸಲಿದ್ದಾರೆ .ನಾಳೆ ಅತಿ ಹೆಚ್ಚು ಹಾಸಿಗೆ ಸಾಮರ್ಥ್ಯ ಹೊಂದಿರುವ ಖಾಸಗಿ  ಮೆಡಿಕಲ್ ಕಾಲೇಜುಗಳ ಜೊತೆಗೆ ಸಭೆ ನಡೆಸಲಾಗುತ್ತದೆ ಎಂದರು.

ಒಂದು ತಿಂಗಳ ಮಗು ಬೆಡ್ ಸಿಗದೆ ಅಮಾನವೀಯವಾಗಿ ಸಾವನ್ನಪ್ಪಿದೆ ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ಸೂಚನೆಯನ್ನು ನೀಡಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಈ ರೀತಿಯ ಪ್ರಕರಣಗಳುಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಅವರು ತಿಳಿಸಿದರು.

ಈಗಾಗಲೇ ಎಲ್ಲೆಲ್ಲಿ ಸೀಲ್‌ ಡೌನ್ ಮಾಡಬೇಕು ಅಲ್ಲೆಲ್ಲಾ ಸೀಲ್ ಡೌನ್ ಮುಂದುವರೆಯುತ್ತದೆ ಇನ್ನು ಮಾಡುತ್ತಿದ್ದೇವೆ. ನಗರದ ಸೋಂಕು ಪ್ರಕರಣಗಳ ಹೆಚ್ಚಿರುವ ಕಡೆಗಳಲ್ಲಿ ಅತಿ ಹೆಚ್ಚು ಪರೀಕ್ಷೆಗಳು ಆಗಬೇಕು ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.ಬೆಡ್, ವೆಂಟಿಲೇಟರ್ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ ಎಂದರು.

ಒಂದು ವಾರದ ನಂತರ ಮತ್ತೆ ಲಾಕ್ ಡೌನ್ ಮುಂದುವರೆಸುವುದಿಲ್ಲ ಈ ಸಂಬಂಧ ಮುಖ್ಯಮಂತ್ರಿಗಳು ತಜ್ಞರ ವರದಿ ಪಡೆದಿದ್ದಾರೆ ಲಾಕ್ ಡೌನ್ ಮುಂದುವರೆಸುವ ಕೆಲಸದಿಂದ ಬರೀ ಸೋಂಕು ಮುಂದೂಡಬಹುದು ಅಷ್ಟೇ ಇದು ಪರಿಹಾರವಲ್ಲ ಹೀಗಾಗಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡಲ್ಲ, ಒಂದು ವಾರದ ಲಾಕ್ ಡೌನ್ ಆದ ಬಳಿಕ ಮತ್ತೆ ಈ ಹಿಂದೆ ಅನೇಕ ಸಂದರ್ಭದಲ್ಲಿ ಇದ್ದ ಕಾನೂನುಗಳು ಮುಂದುವರೆಯುತ್ತದೆ ಎಂದು ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

SCROLL FOR NEXT