ರಾಜ್ಯ

ಪೊಕ್ಸೊ ಕಾಯ್ದೆ ಸಂತ್ರಸ್ಥ ಮಕ್ಕಳ ಬೆಂಬಲಕ್ಕಾಗಿ ಹೊಸ ಮಾರ್ಗಸೂಚಿ ಪ್ರಕಟ

Raghavendra Adiga

ಬೆಂಗಳುರು: ಬೆಂಗಳೂರು ನಗರ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಹೊಸ ಮಾರ್ಗಸೂಚಿಗಳನ್ನು ರೂಪಿಸಿದ್ದು ಇದು  ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ವೈಯಕ್ತಿಕ ಮತ್ತು ಕಾನೂನು ಬೆಂಬಲವನ್ನು ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ 2012, ಮಗುವಿಗೆ ಮಾನಸಿಕ ಆರೋಗ್ಯ, ವೈದ್ಯಕೀಯ ನೆರವು, ಮಗು ಮತ್ತು ಮಗುವಿನ ಕುಟುಂಬದ ನಡುವೆ ಸಂಬಂಧ ಕಲ್ಪಿಸುವುದು ಮುಂತಾದ ವಿವಿಧ ರೀತಿಯ ಸಹಾಯವನ್ನು ಒದಗಿಸಲು “ಬೆಂಬಲಿಸುವ ವ್ಯಕ್ತಿಗಳನ್ನು(ಸಪೊರ್ಟ್ ಪರ್ಸನ್ಸ್)” ನೇಮಕ ಮಾಡಲು ಅನುಮತಿಸುತ್ತದೆ. 

ದೌರ್ಜನ್ಯಕ್ಕೊಳಗಾದ ಮಗುವಿಗೆ ಅನೇಕ ರೀತಿಯ ಬೆಂಬಲ, ಸಹಾಯದ ಅಗತ್ಯವಿರುವ ಕಾರಣ ಮಕ್ಕಳ ರಕ್ಷಣೆಗಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಯು, ಸ್ಟೇಟ್ ಹೋಂ ಅಧಿಕಾರಿಯಂತಿರಲಿದ್ದು ನಿಖರವಾಗಿ ಆತನ ಪಾತ್ರವೇನೆಂದು ಸಾಕಷ್ಟು ಸ್ಪಷ್ಟತೆ ಇಲ್ಲ ಎಂದು ಸಿಡಬ್ಲ್ಯೂಸಿ ಸದಸ್ಯರು ಹೇಳುತ್ತಾರೆ. ಇದು ಮಗುವಿನ ಪಾಲನೆಯನ್ನು ಒಳಗೊಂಡಿದೆ. ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕದಿಂದ ನೇಮಕಗೊಂಡ ವ್ಯಕ್ತಿಯನ್ನು ಕಾಯಿದೆಯಡಿ ನೇಮಕ ಮಾಡಲು ಅರ್ಹವನ್ನಾಗಿಸಲಿದೆ. "ಕಾಯ್ದೆಯಲ್ಲಿ ಎಲ್ಲಿಯೂ ನಮಗೆ ಸಪೋರ್ಟ್ಪರ್ಸನ್  ಪಾತ್ರವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಆದ್ದರಿಂದ, ಸಿಡಬ್ಲ್ಯೂಸಿ ಮತ್ತು ಆ ವ್ಯಕ್ತಿಯ ನಡುವೆ ಗೊಂದಲವಿತ್ತು. ನಾವು ವಿವಿಧ ವ್ಯಕ್ತಿಗಳ ಮತ್ತು ತಜ್ಞರಿಂದ ಸಲಹೆಗಳನ್ನು ಪಡೆದುಕೊಂಡಿದ್ದೇವೆ ಮತ್ತು ನಮ್ಮ ನ್ಯಾಯವ್ಯಾಪ್ತಿಗಾಗಿ ಈ ಎಸ್‌ಒಪಿಯನ್ನು ರಚಿಸಿದ್ದೇವೆ ”ಎಂದು ಬೆಂಗಳೂರು ನಗರ ಜಿಲ್ಲೆಯ ಸಿಡಬ್ಲ್ಯೂಸಿ ಅಧ್ಯಕ್ಷ ಅಂಜಲಿ ರಾಮಣ್ಣ ಹೇಳಿದರು.

ಒಬ್ಬ ವ್ಯಕ್ತಿ ಅಥವಾ ಸಂಘಟನೆಯನ್ನು ಸಪೋರ್ಟ್ ಪರ್ಸನ್ ಆಗಿ ನೇಮಿಸಬೇಕಾದಾಗ, ಅವರು ಯಾವ ರೀತಿಯ ಸಹಾಯವನ್ನು ನೀಡುತ್ತಾರೆ ಎಂಬುದನ್ನು ಅವರು ಅಧಿಕೃತ ಪತ್ರದಲ್ಲಿ ನಮೂದಿಸಬೇಕು ಎಂದು ಅವರು ಹೇಳಿದರು. ದೃಢೀಕರಣ  ಪತ್ರವು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ, ಮತ್ತು ಅದರ ಕೊನೆಯಲ್ಲಿ, ಅದನ್ನು ನವೀಕರಿಸಬೇಕಾಗುತ್ತದೆ. ಸಪೋರ್ಟ್ ಪರ್ಸನ್ ತಿಂಗಳಿಗೊಮ್ಮೆ ಸಿಡಬ್ಲ್ಯೂಸಿಗೆ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಬೇಕು. ಅಧಿಕೃತ ಪತ್ರದ ಪ್ರತಿಯನ್ನು ವಿಶೇಷ ಬಾಲಾಪರಾಧಿ ಪೊಲೀಸ್ ಘಟಕಕ್ಕೂ ಕಳುಹಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. 

SCROLL FOR NEXT