ರಾಜ್ಯ

ಸ್ಥಳೀಯ ಸಂಘಟನೆಯ ಮಾದರಿ ಕಾರ್ಯ: ಕನಕಪುರ ರಸ್ತೆ ನಿವಾಸಿಗಳ ಯೋಗಕ್ಷೇಮಕ್ಕಾಗಿ ಆಂಬುಲೆನ್ಸ್ ಸೇವೆ

ಕೋವಿಡ್ ಸೋಂಕು ತಗುಲಿದ ಹಾಗೂ ಕೋವಿಡ್ ಶಂಕಿತಮತ್ತು ಕೋವಿಡ್ ಅಲ್ಲದ ರೋಗಿಗಳ ಸಾವಿಗೆ ಕಾರಣವಾಗುವ ಆಂಬುಲೆನ್ಸ್‌ಗಳ ಕೊರತೆಯ ಭಯಾನಕ ಕಥೆಗಳನ್ನು ಕೇಳಿದ ನಂತರ, ‘ಚೇಂಜ್ ಮೇಕರ್ಸ್ ಆಫ್ ಕನಕಪುರ ’ 3,700 ಕುಟುಂಬಗಳನ್ನು ಪೊರೆಯಲು ತಾನು ಪ್ರತ್ಯೇಕ ಆಂಬ್ಯುಲೆನ್ಸ್ ಅನ್ನು ಬಾಡಿಗೆಗೆ ಪಡೆದಿದೆ.

ಬೆಂಗಳೂರು: ಸ್ಥಳೀಯ ನಿವಾಸಿಗಳ ಕಲ್ಯಾಣ ಸಂಘಗಳ  ಈ ಗುಂಪು ಸ್ವಯಂ ಸಹಾಯವೇ ಅತ್ಯುತ್ತಮ ಸಹಾಯವೆಂದು ಬಾವಿಸುತ್ತದೆ. ಕೋವಿಡ್ ಸೋಂಕು ತಗುಲಿದ ಹಾಗೂ ಕೋವಿಡ್ ಶಂಕಿತಮತ್ತು ಕೋವಿಡ್ ಅಲ್ಲದ ರೋಗಿಗಳ ಸಾವಿಗೆ ಕಾರಣವಾಗುವ ಆಂಬುಲೆನ್ಸ್‌ಗಳ ಕೊರತೆಯ ಭಯಾನಕ ಕಥೆಗಳನ್ನು ಕೇಳಿದ ನಂತರ, ‘ಚೇಂಜ್ ಮೇಕರ್ಸ್ ಆಫ್ ಕನಕಪುರ ’ 3,700 ಕುಟುಂಬಗಳನ್ನು ಪೊರೆಯಲು ತಾನು ಪ್ರತ್ಯೇಕ ಆಂಬ್ಯುಲೆನ್ಸ್ ಅನ್ನು ಬಾಡಿಗೆಗೆ ಪಡೆದಿದೆ.

ಚೇಂಜ್ ಮೇಕರ್ಸ್ ಕನಕಪುರ ರಸ್ತೆಯ 37 ಆರ್‌ಡಬ್ಲ್ಯೂಎ ಮತ್ತು ಅಪಾರ್ಟ್‌ಮೆಂಟ್‌ಗಳ ಒಕ್ಕೂಟವಾಗಿದೆ. ಅವರು ಈ ಆಂಬ್ಯುಲೆನ್ಸ್ ಬಾಡಿಗೆಯ ವೆಚ್ಚವನ್ನು ತಮ್ಮಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು ಪ್ರತಿ ಕುಟುಂಬಕ್ಕೆ ತಿಂಗಳಿಗೆ 60 ರೂ. ಆಗಿರಲಿದೆ. ಐಸಿಯು ತರಬೇತಿ ಪಡೆದ ಶುಶ್ರೂಷಾ ಸಿಬ್ಬಂದಿ ಮತ್ತು ಚಾಲಕರೊಂದಿಗೆ ಈ ವಾಹನವು ಕನಕಪುರ ರಸ್ತೆಯ ಕೋಣನಕುಂಟೆ  ಕ್ರಾಸ್ ಬಳಿ ಸ್ಟ್ಯಾಂಡ್‌ಬೈನಲ್ಲಿ ಇರಲಿದೆ.

"ತಮ್ಮ ಆಂಬುಲೆನ್ಸ್ ಲಭ್ಯವಿಲ್ಲ ಮತ್ತು ಒಂದು ಗಂಟೆಯ ನಂತರ ಮಾತ್ರ ತಲುಪಬಹುದು ಎಂದು ಆಸ್ಪತ್ರೆ ಯವರ ಉತ್ತರದ ನಂತರ ಹೃದಯಾಘಾತದಿಂದ ಬಳಲುತ್ತಿದ್ದ ಇಲ್ಲಿನ ನಿವಾಸಿಯೊಬ್ಬರು ನಿಧನರಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ಲಘು ಹೃದಯಾಘಾತದಿಂದ ಬಳಲುತ್ತಿದ್ದ ಮತ್ತು ಉಸಿರಾಟದ ತೊಂದರೆಯಿದ್ದ ವ್ಯಕ್ತಿಗೆ ಸಕಾಲದಲ್ಲಿ ಆಂಬ್ಯುಲೆನ್ಸ್ ಪಡೆಯಲು ಸಾಧ್ಯವಾಗಲಿಲ್ಲ ಏಕೆಂದರೆ ಎಲ್ಲಾ ಆಸ್ಪತ್ರೆಗಳು ಇದು ಕೋವಿಡ್ ಪ್ರಕರಣ ಎಂದು ಭಯಪಟ್ಟವು. ಅಂತಿಮವಾಗಿ, ಕುಟುಂಬವು ಅವನನ್ನು ಕಾರಿನಲ್ಲಿ ಕರೆದೊಯ್ಯಬೇಕಾಯಿತು ”ಎಂದು ಚೇಂಜ್ ಮೇಕರ್ಸ್ ಸದಸ್ಯ ಅಬ್ದುಲ್ ಅಲೀಮ್ ಹೇಳಿದರು.

ಮೂರು ಎಂಟು ಗಂಟೆಗಳ ಪಾಳಿಯಲ್ಲಿ ಮೂರು ದಾದಿಯರು, ಮತ್ತು 12-ಗಂಟೆಗಳ ಪಾಳಿಯಲ್ಲಿ ಇಬ್ಬರು ಚಾಲಕರನ್ನು ವಾಹನಕ್ಕೆ ನಿಯೋಜಿಸಲಾಗಿದೆ. ಇದು ಸಾರಕ್ಕಿ ಸಿಗ್ನಲ್‌ನಿಂದ ನೈಸ್ ರಸ್ತೆ ಜಂಕ್ಷನ್‌ವರೆಗಿನ ನಿವಾಸಿಗಳ ನೆರವಿಗೆ ಧಾವಿಸಲಿದೆ.  "ಅಗತ್ಯವಿದ್ದರೆ ಮಾಲೀಕರು  ಅದೇ ಸಮಯದಲ್ಲಿ ನಮಗೆ ಇನ್ನೂ ಒಂದು ಆಂಬ್ಯುಲೆನ್ಸ್ ನೀಡುವುದಾಗಿ ಭರವಸೆ ನೀಡಿದ್ದಾನೆ" ಎಂದು ಅಲೀಮ್ ಹೇಳಿದರು. "ರೋಗಿಯು ಕೋವಿಡ್-ಪಾಸಿಟಿವ್ ಆಗಿರಲಿ ಅಥವಾ ಇಲ್ಲದಿರಲಿ, ಪ್ರತಿ ಆಸ್ಪತ್ರೆಗೆ ತಲುಪಿಸಿದ ನಂತರ ಆಂಬ್ಯುಲೆನ್ಸ್ ಅನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗುತ್ತದೆ," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ