ರಾಜ್ಯ

ವಿಜಯಪುರ: ಕೇವಲ ಒಂದೇ ವಾರದಲ್ಲಿ ಕೊರೋನಾ ಪ್ರಕರಣಗಳು ದುಪ್ಪಟ್ಟು!

Shilpa D

ವಿಜಯಪುರ:  ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಐದು ದಿನಗಳಲ್ಲಿ ಶೇ.10.9 ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ, ಕೇವಲ ಒಂದೇ ವಾರದಲ್ಲಿ ಕೊರೋನಾ ಕೇಸ್ ಡಬಲ್ ಆಗಿವೆ.

ಜುಲೈ 11ರಂದು ಜಿಲ್ಲೆಲ್ಲಿ 758 ಕೇಸ್ ಗಳಿದ್ದವು, ಆದರೆ 7 ದಿನಕ್ಕೆ 827 ಹೊಸ ಪ್ರಕರಣ ದಾಖಲಾಗಿವೆ. ಪರೀಕ್ಷೆಗಾಗಿ ಸುಮಾರು 40 ಸಾವಿರ ಮಾದರಿ ಸಂಗ್ರಹಿಸಿದ್ದು, ಶೇ, 70 ರಷ್ಟು ಮಾದರಿಯನ್ನು ನಗರದ ದುರ್ಬಲ ಪ್ರದೇಶಗಳಿಂದ ಸಂಗ್ರಹಿಸಲಾಗಿದೆ, ಇದರಲ್ಲಿ 1,585 ಪಾಸಿಟಿವ್ ಮತ್ತು 36,334 ನೆಗೆಟಿವ್ ಕಂಡು ಬಂದಿದೆ, ವಿಜಯಪುರದಲ್ಲಿ 1 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ದಾಖಲಾಗಿವೆ, ನಗರದ ಮಿತಿಯಲ್ಲಿಯೇ ಶೇ,95 ರಷ್ಟು ಪ್ರಕರಣಗಳು ದಾಖಲಾಗಿವೆ.

ಇದೇ ವೇಳೆ ಜಿಲ್ಲೆಯ ಕೊಲ್ಹಾರ ತಾಲೂಕಿನಲ್ಲಿ ಕೇವಲ 7 ಕೇಸ್ ಮಾತ್ರ ದಾಖಲಾಗಿದೆ. ಪ್ರಕರಣಗಳು ವೇಗವಾಗಿ ವರದಿಯಾಗುತ್ತಿದ್ದರೂ, ರೋಗಿಗಳು ಅದೇ ವೇಗದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಶೇಕಡಾ 65 ರಷ್ಟು ರೋಗಿಗಳು ಡಿಸ್ಚಾರ್ಜ್ ಆಗುತ್ತಿದ್ದಾರೆ. ಮರಣದ ಪ್ರಮಾಣವು ಶೇಕಡಾ 1.5 ಕ್ಕಿಂತ ಕಡಿಮೆಯಿದೆ ”ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದರು.
 

SCROLL FOR NEXT