ರಾಜ್ಯ

ನಿಗದಿಪಡಿಸಿದ ದಿನಾಂಕವೇ ಸಿಇಟಿ: ವಿದ್ಯಾರ್ಥಿಗಳು, ಪೋಷಕರ ಅಸಮಾಧಾನ

Sumana Upadhyaya

ಬೆಂಗಳೂರು: ನಿಗದಿಯಾಗಿರುವಂತೆ ಈ ತಿಂಗಳ ಅಂತ್ಯದಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಆದರೆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ ಸಿಇಟಿ ಪರೀಕ್ಷೆ ಈಗ ನಡೆಸುವ ಅಗತ್ಯವೇನಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಈ ಸಮಯದಲ್ಲಿ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಹೋಗುವುದು ಕಷ್ಟ ಮತ್ತು ಅಪಾಯ. ನಮಗೆ ಕೋವಿಡ್-19 ಸೋಂಕು ತಗಲಿದರೆ ಮುಂದೆ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಎದುರಿಸುವುದು ಕಷ್ಟವಾಗಬಹುದು ಎನ್ನುತ್ತಾರೆ ರಿತಿಕಾ ಎಂಬ ವಿದ್ಯಾರ್ಥಿನಿ.

ಸಿಇಟಿ ಪರೀಕ್ಷೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ(ಎಐಡಿಎಸ್ಒ), ಸರ್ಕಾರದ ನಿರ್ಧಾರವನ್ನು ಸಾರ್ವಜನಿಕವಾಗಿ ಖಂಡಿಸಿದೆ. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರಿಗೆ ಕೊರೋನಾ ಬಂದರೆ ಸರ್ಕಾರವೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಂಘದ ಸದಸ್ಯ ಧ್ರುವ ಜತ್ತಿ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಸರ್ಕಾರದ ಸಿಇಟಿ ನಿಗದಿಯಂತೆ ಜುಲೈ 30 ಮತ್ತು 31ಕ್ಕೆ ನಡೆಯಲಿದೆ.

SCROLL FOR NEXT