ರಾಜ್ಯ

ಶಿವಮೊಗ್ಗ: ಪಿಪಿಇ ಕಿಟ್, ವೇತನ ಹೆಚ್ಚಳಕ್ಕೆ ಒತ್ತಾಯ, 14 ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

Nagaraja AB

ಶಿವಮೊಗ್ಗ: ತಿಂಗಳಿಗೆ ಕನಿಷ್ಠ 12 ಸಾವಿರ ರೂ. ವೇತನ ನೀಡಬೇಕು ಹಾಗೂ ವೈಯಕ್ತಿಕ ಸುರಕ್ಷತಾ ಸಾಧನ- ಪಿಪಿಇ ಕಿಟ್ ಗಳನ್ನು 
ನೀಡಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಡಿಯಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ
ಪ್ರತಿಭಟನೆ 14ನೇ ದಿನಕ್ಕೆ ಕಾಲಿಟ್ಟಿದೆ.

ಜುಲೈ 10ರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದು, ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ಸರ್ಕಾರ ತಮ್ಮ ಸಮಸ್ಯೆಗಳಿಗೆ ಕಿವಿಗೂಡುತ್ತಿಲ್ಲಎಂದು ಆರೋಪಿಸಿದ್ದಾರೆ.

ಲಾಕ್ ಡೌನ್ ಆರಂಭದಿಂದಲೂ ಯಾವುದೇ ಸುರಕ್ಷತೆ ಇಲ್ಲದೆ ದಣಿವರಿಯದೆ  ಕೆಲಸ ಮಾಡಿದ್ದೇವೆ. ಇಲಾಖೆಯಿಂದ ಗುಣಮಟ್ಟವಿಲ್ಲದ
ಸಾಧನಗಳನ್ನು ನೀಡಲಾಗಿದೆ. ಪ್ರಸ್ತುತ ಪಡೆಯುತ್ತಿರುವ ವೇತನವನ್ನು ಆರು ಸಾವಿರದಿಂದ 12 ಸಾವಿರಕ್ಕೆ ಹೆಚ್ಚಿಸಬೇಕು ಹಾಗೂ ಪಿಪಿಇ ಕಿಟ್ ಗಳನ್ನು ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಚಪ್ಪಾಳೆ ಹೊಡೆಯುತ್ತಾರೆ. ಆದರೆ, ಸವಲತ್ತು ನೀಡಲ್ಲ ಎಂದು ಪ್ರತಿಭಟನಾನಿರತ ಪ್ರೇಮ ಆರೋಪಿಸಿದರು.

SCROLL FOR NEXT