ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಮಹಿಳೆಯನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ ಡೆಲಿವರಿ ಬಾಯ್

ಆರ್ಡರ್ ಮಾಡಿದ್ದ ವಸ್ತು ನೀಡಲು ಬಂದ ಪ್ರತಿಷ್ಠಿತ ಕಂಪನಿಯೊಂದರ ಡೆಲಿವರಿ ಬಾಯ್'ವೊಬ್ಬ ಮಹಿಳೆಯನ್ನು ಎಳೆದು ಲೈಂಗಿಕ ಕಿರುಕುಳ ನೀಡಿರುವ ಘಟನೆ ಗರುಡಾಚಾರ್ ಪಾಳ್ಯದಲ್ಲಿ ನಡೆದಿದೆ. 

ಬೆಂಗಳೂರು: ಆರ್ಡರ್ ಮಾಡಿದ್ದ ವಸ್ತು ನೀಡಲು ಬಂದ ಪ್ರತಿಷ್ಠಿತ ಕಂಪನಿಯೊಂದರ ಡೆಲಿವರಿ ಬಾಯ್'ವೊಬ್ಬ ಮಹಿಳೆಯನ್ನು ಎಳೆದು ಲೈಂಗಿಕ ಕಿರುಕುಳ ನೀಡಿರುವ ಘಟನೆ ಗರುಡಾಚಾರ್ ಪಾಳ್ಯದಲ್ಲಿ ನಡೆದಿದೆ. 

ಅರುಣ್ ಕುಮಾರ್ ಎಂಬ ಯುವಕ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ಆರ್ಡರ್ ಮಾಡಿದ್ದ ವಸ್ತು ನೀಡಲು ತೆರಳಿದ್ದಾನೆ. ಕ್ಯಾಶ್ ಆನ್ ಡೆಲಿವರಿ ಆಗಿದ್ದರಿಂದ ಮಹಿಳೆ ಆನ್'ಲೈನ್ ಮೂಲಕ ಹಣ ಪಾವತಿ ಮಾಡಲು ಹೊರಟಿದ್ದಾರೆ. ಈ ವೇಳೆ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು, ಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ವೇಳೆ ಡೆಲಿವರಿ ಬಾಯ್ ಶೌಚಾಲಯ ಬಳಕೆ ಮಾಡಬಹುದಾ ಎಂದು ಕೇಳಿದ್ದ. ಮಾನವೀಯತೆಯ ಆಧಾರದ ಮೇಲೆ ನಾನು ಬಳಕೆ ಮಾಡುವಂತೆ ತಿಳಿಸಿದೆ. 

ಶೌಚಾಲಯದಿಂದ ಹೊರ ಬರುತ್ತಿದ್ದಂತೆಯೇ ವಿಚಿತ್ರವಾಗಿ ವರ್ತಿಸಲು ಆರಂಬಿಸಿದ್ದ. ಸೋಫಾ ಮೇಲೆ ಕುಳಿತುಕೊಂಡ. ನಾನು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಆರ್ಡರ್ ಕ್ಯಾನ್ಸಲ್ ಮಾಡಲು ಮುಂದಾದೆ. ಈ ವೇಳೆ ಯುವಕ ಹಣ ಪಾವತಿ ಮಾಡುವಂತೆ ಬಲವಂತ ಮಾಡಿದೆ. ಬಳಿಕ ಹಣ ತರಲು ರೂಮ್'ಗೆ ತೆರಳಿದಾಗ ಅಲ್ಲಿಗೆ ಬಂದ ಯುವಕ ಹಿಂದಿನಿಂದ ತಬ್ಬಿಕೊಂಡು, ಕಿರುಕುಳ ನೀಡಲು ಆರಂಭಿಸಿದ. ಕೂಡಲೇ ಅಲ್ಲಿಂದ ತಪ್ಪಿಸಿಕೊಂಡು ಮನೆಯಿಂದ ಹೊರ ಬಂದೆ ಎಂದು ಮಹಿಳೆ ಹೇಳಿದ್ದಾರೆ. 

ಘಟನೆ ಸಂಬಂಧ ಿದೀಗ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಯುವಕನ ವಿರುದ್ಧ ಲೈಂಗಿಕ ಕಿರುಕುಳ ಸೆಕ್ಷನ್ 354 ಎ, 509 ಮಹಿಳೆಗೆ ಅವಮಾನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT