ರಾಜ್ಯ

ಅಕ್ರಮ ಹಣ ಪತ್ತೆ ಪ್ರಕರಣ: ಡಿ.ಕೆ.ಶಿವಕುಮಾರ್'ಗೆ ಎದುರಾಯ್ತು ಮತ್ತೊಂದು ಸಂಕಷ್ಟ

Manjula VN

ಬೆಂಗಳೂರು: ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನು ರದ್ದು ಮಾಡುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರ ಆಪ್ತ ಶಶಿಕುಮಾರ್ ಅವರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. 

ದೆಹಲಿ ಡಿಕೆಶಿ ನಿವಾಸದಲ್ಲಿ ಸಿಕ್ಕಿದ್ದ ಅಕ್ರಮ ಹಣ ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಒಪ್ಪಿದೆ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಪರಿಶೀಲನೆ ಆರಂಭಿಸಿದೆ. 

ತನಿಖೆ ರದ್ದು ಮಾಡುವಂತೆ ಈ ಹಿಂದೆ ಡಿಕೆಶಿ ಆಪ್ತ ಶಶಿಕುಮಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ಅರ್ಜಿಯನ್ನು ವಜಾಗೊಳಿಸಿದೆ. 

ಅರ್ಜಿದಾರರ ವಕೀಲರು, ಪ್ರಕರಣವನ್ನು ಸಿಬಿಐ ತನಿಖೆಗ ಪೂರ್ವಾನುಮತಿ ನೀಡಿ ರಾಜ್ಯ ಸರ್ಕಾರ 2019ರ ಸೆ.25ರಂದು ಆದೇಶಿಸಿದೆ. ಆದರೆ, ಪೂರ್ವಾನುಮತಿ ನೀಡಲು ಸಕಾರಣಗಳೊಂದಿಗೆ ವಿವರವಾದ ಆದೇಶ ಹೊರಡಿಸಬೇಕಿತ್ತು. ಆದರೆ, ಆದೇಶದಲ್ಲಿ ಕಾರಣಗಳನ್ನು ತಿಳಿಸಿಲ್ಲ ಎಂದು ದೂರಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, ಅರ್ಜಿದಾರ ಒಪ್ಪಿಗೆ ಬದಲಿಗೆ ಮಂಜೂರಾತಿ ಎಂಬ ಪದವನ್ನು ಬಳಕೆ ಮಾಡಿದ್ದರಿಂದ ವಿವಾದ ಹುಟ್ಟಿಕೊಂಡಿದೆ. ಮತ್ತು ಇದರಲ್ಲಿ ದೋಷ ಕೂಡ ಕಂಡು ಬಂದಿದೆ. ವಿಚಾರಣೆಯನ್ನು ಕೇಂದ್ರದ ಅನುಮೋದನೆಯಿಲ್ಲದೆ ಸಿಬಿಐ ಪ್ರಾರಂಭಿಸಿದಿದ್ದರೆ ಅರ್ಜಿದಾರರಿಗೆ ಪ್ರಶ್ನಿಸುವ ಹಕ್ಕಿತ್ತು, ಆದರೆ ಗೃಹ ಇಲಾಖೆಯಿಂದ ನೀಡಲ್ಪಟ್ಟ ಒಪ್ಪಿಗೆಯ ಆದೇಶವನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂದು ತಿಳಿಸಿದೆ. 

SCROLL FOR NEXT