ರಾಜ್ಯ

ಅರ್ಚಕರು, ದೇವಾಲಯ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಸಿದ್ದತೆ 

Raghavendra Adiga

ಬೆಂಗಳೂರು: ರಾಜ್ಯದಲ್ಲಿನ ಸುಮಾರು 50,000  ಮಂದಿ ಅರ್ಚಕರು ಹಾಗೂ ಮುಜರಾಯಿ ಇಲಾಖೆ ದೇವಾಲಯದಲ್ಲಿ ಕೆಲಸ ನಿರ್ವಹಿಸುವ  ಇತರ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವಿಮಾ ರಕ್ಷಣೆಯನ್ನು ನೀಡುವ ಕ್ರಮಗಳನ್ನು ಪ್ರಾರಂಭಿಸಿದೆ.

ಎಂಡೋಮೆಂಟ್ಸ್ ವಿಭಾಗದ ಪ್ರಧಾನ ಕಾರ್ಯದರ್ಶಿಗೆ ಗುರುವಾರ ಬರೆದ ಪತ್ರದಲ್ಲಿ ಈ ವಿವರಗಳಿದ್ದು ಆ ಪತ್ರದ ಪ್ರತಿಯು ಪತ್ರಿಕೆಗೆ ಸಿಕ್ಕಿದೆ, ಅಲ್ಲದೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಅರ್ಚಕರಿಗೆ, ನೌಕರರ ಕುಟುಂಬಗಳಿಗೆ  ಪರಿಹಾರ ನೀಡುವ ಕುರಿತು  ನಿರ್ಧಾರವನ್ನು ಶೀಘ್ರವಾಗಿ ಕಾರ್ಯಗತಗೊಳಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. 

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ಮುಜರಾಯಿ ಇಲಾಖೆಯ ಅಡಿಯಲ್ಲಿನ ದೇವಾಲಯಗಳಲ್ಲಿನ ನೌಕರರಿಗೆ ವಿಮಾ ರಕ್ಷಣೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯಡಿ ವಿಮಾ ಸೌಲಭ್ಯ ಕಲ್ಪಿಸುವಂತೆ  ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಕೇಂದ್ರ ವಿಮಾ ಯೋಜನೆಯು ಅಪಘಾತಗಳಿಂದ ಸಾವನ್ನಪ್ಪಿದಲ್ಲಿ ಕುಟುಂಬ ಸದಸ್ಯರಿಗೆ 2 ಲಕ್ಷ ರೂ. ಪರಿಹಾರ ನೀಡಲಿದೆ.

ರಾಜ್ಯದಲ್ಲಿನ 34,559 ದೇವಾಲಯಗಳುಮುಜರಾಯಿ ಇಲಾಖೆಯಡಿ ಬರಲಿದ್ದು ಅವುಗಳಲ್ಲಿ 175 ವರ್ಗ-ಎ (ವಾರ್ಷಿಕ 25 ಲಕ್ಷ ರೂ. ಆದಾಯದೊಂದಿಗೆ), 163 ವರ್ಗ-ಬಿ (ವಾರ್ಷಿಕ ಆದಾಯ 5-25 ಲಕ್ಷ ರೂ.) ಮತ್ತು 34,221 ಗಳು ವರ್ಗ-ಸಿ (ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ). ದೇವಾಲಯಗಳಾಗಿದೆ, ಈ ದೇವಾಲಯಗಳಲ್ಲಿ ಸುಮಾರು 50,000 ಪ್ರಧಾನ  ಅರ್ಚಕರು, ಗ್ರೂಪ್ ಸಿ ಮತ್ತು ಡಿ ನೌಕರರು ಕೆಲಸ ಮಾಡುತ್ತಾರೆ, ಆದರೆ ಅವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲಾಗುವುದಿಲ್ಲ. ಅವರ ವೇತನವನ್ನು ಆಯಾ ದೇವಾಲಯದ ಟ್ರಸ್ಟ್‌ಗಳು ಪಾವತಿಸುತ್ತವೆ.

ಇದುವರೆಗೂ ಅರ್ಚಕರು ಸೇರಿದಂತೆ ದೇವಾಲಯದ ಸಿಬ್ಬಂದಿಗೆ ಆರೋಗ್ಯ ವಿಮೆ ಅಥವಾ ನೌಕರರ ರಾಜ್ಯ ವಿಮೆ ಅಥವಾ ಭವಿಷ್ಯ ನಿಧಿಯಂತಹ ಇತರ ಸೌಲಭ್ಯಗಳು ಇರಲಿಲ್ಲ. “ನಾವು ಆರೋಗ್ಯ ಅಥವಾ ಇಎಸ್‌ಐ ಕಾರ್ಡ್‌ಗಳನ್ನು ಪರಿಚಯಿಸಿದರೆ, ಕುಟುಂಬಗಳಿಗೆ ವೈದ್ಯಕೀಯ ವಿಮೆ ಸಿಗುತ್ತದೆ. ನಾವು ಹಣಕಾಸು ಇಲಾಖೆಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಅರ್ಚಕರು ಹಾಗೂ ಇತರರಿಗೆ ಪಿಂಚಣಿ ಪರಿಚಯಿಸುವ ಯೋಜನೆ ನಮ್ಮಲ್ಲಿದೆ. ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಕಳೆದ ವರ್ಷ, ವಿಮೆ ಮತ್ತು ತಮ್ಮ ದೈನಂದಿನ ವೇತನವನ್ನು `249 ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಅರ್ಚಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಕ್ಲಾಸ್-ಸಿ ದೇವಾಲಯಗಳಲ್ಲಿನ ಅರ್ಚಕರಿಗೆ ಈಗ ತಿಂಗಳಿಗೆ ಸುಮಾರು 4,000 ರೂ. ವೇಅನ ನೀಡಲಾಗುತ್ತಿದೆ. 

SCROLL FOR NEXT