ರಾಜ್ಯ

ಮೈಸೂರಿನಲ್ಲಿ ಕೊರೋನಾ ಹೆಚ್ಚಳ: ಲೌಡ್ ಸ್ಪೀಕರ್ ಮೂಲಕ ಜಾಗೃತಿಗೆ ಮುಂದಾದ ಮಹಾನಗರ ಪಾಲಿಕೆ

Lingaraj Badiger

ಮೈಸೂರು: ಮೈಸೂರಿನಲ್ಲಿ ಸಾರ್ವಜನಿಕ ಪ್ರಕಟಣೆಗಳಿಗಾಗಿ ಕಸದ ಮಿನಿ ಲಾರಿಯ ಮೇಲೆ ಫಿಕ್ಸ್ ಮಾಡಲಾಗಿರುವ ಲೌಡ್ ಸ್ಪೀಕರ್ ಗಳು ಈಗ ಅರಮನೆ ನಗರಿಯ ನಿವಾಸಿಗಳ ಗಮನ ಸೆಳೆಯುತ್ತಿವೆ.

ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಕಸದ ಮಿನಿ ಲಾರಿಗಳ ಮೇಲಿರುವ ಲೌಡ್ ಸ್ಪೀಕರ್ ಅನ್ನು ಬಳಸಿಕೊಂಡು ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಕೆಲವು ಕಸ ಸಂಗ್ರಹಿಸುವ ಮಿನಿ ಟ್ರಕ್‌ಗಳು ಮತ್ತು ಆಟೋಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಜನರಿಗೆ COVID-19 ಬಗ್ಗೆ ಅರಿವು ಮೂಡಿಸಲು ಮತ್ತು ವೈರಸ್ ಹರಡುವುದನ್ನು ತಡೆಯಲು ಹಾಗೂ ಸುರಕ್ಷಿತವಾಗಿರಲು ಅನುಸರಿಸಬೇಕಾದ ಕ್ರಮಗಳು ತಿಳಿಸಲಾಗುತ್ತಿದೆ.

ನಗರದ ಎಲ್ಲಾ 65 ವಾರ್ಡ್‌ಗಳಿಂದ ತ್ಯಾಜ್ಯವನ್ನು ಸಂಗ್ರಹಿಸುವ ಪೌರಕರ್ಮಿಕರು ರೆಕಾರ್ಡ್ ಮಾಡಿದ ಆಡಿಯೊವನ್ನು ಪ್ಲೇ ಮಾಡುತ್ತಿದ್ದಾರೆ.

SCROLL FOR NEXT