ರಾಜ್ಯ

ಅಂತಾರಾಷ್ಟ್ರೀಯ ಹುಲಿ ದಿನ: ಹುಲಿ ಸಂರಕ್ಷಣೆಗೆ ಸಂಕಲ್ಪ ತೊಡುವಂತೆ ಮುಖ್ಯಮಂತ್ರಿ ಕರೆ

Srinivasamurthy VN

ಬೆಂಗಳೂರು: ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಮುಖ್ಯಮಂತ್ರಿ ನಾಡಿನ ಜನತೆಗೆ ಸಂದೇಶ ನೀಡಿ, ಹುಲಿ ಸಂರಕ್ಷಣೆಯ ಸಂಕಲ್ಪ ತೊಡುವಂತೆ ಕರೆ ನೀಡಿದ್ದಾರೆ.

ಕರ್ನಾಟಕವು ಶ್ರೀಮಂತ ಜೀವವೈವಿಧ್ಯತೆಯ ಭೂಮಿಯಾಗಿದೆ. ನಮ್ಮ ರಾಷ್ಟ್ರೀಯ ಉದ್ಯಾನಗಳು ಮತ್ತು ಹುಲಿ ಮೀಸಲು ಪ್ರದೇಶಗಳಿಂದಾಗಿ, ಭಾರತದ 2 ನೇ ಅತಿದೊಡ್ಡ ಹುಲಿ ಜನಸಂಖ್ಯೆ ಹೊಂದಿರುವ ಹೆಮ್ಮೆಯ ನೆಲೆ ನಮ್ಮ ರಾಜ್ಯವಾಗಿದೆ. ಇಂದು ಅಂತಾರಾಷ್ಟ್ರೀಯ ಹುಲಿ ದಿನದ ಈ ಸಂದರ್ಭದಲ್ಲಿ ನಾವು ಹುಲಿಗಳನ್ನು ರಕ್ಷಿಸಲು ಮತ್ತು ಅವರ ಆವಾಸಸ್ಥಾನವನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ, ಇಂದು ಅಂತಾರಾಷ್ಟ್ರೀಯ ಹುಲಿ ದಿನ. ವಿಶ್ವದಲ್ಲೇ ಅತೀ ಹೆಚ್ಚು ಹುಲಿ ಸಂರಕ್ಷಿಸುತ್ತಿರುವುದು ನಮ್ಮ ದೇಶದ ಹಿರಿಮೆ ಹಾಗೂ ದೇಶದಲ್ಲೇ ಕರ್ನಾಟಕ ಹುಲಿ ಸಂರಕ್ಷಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಪ್ರಾಣಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದ್ದಾರೆ.

SCROLL FOR NEXT