ರಾಜ್ಯ

ರಾಮನ ಕೈನಲ್ಲಿ ಬಿಲ್ಲು-ಬಾಣ ಬೇಡ: ಪಟ್ಟಾಭಿಷಿಕ್ತ ರಾಮನ ಫೋಟೊ ಬಳಸುವುದು ಸೂಕ್ತ

Shilpa D

ಬೆಂಗಳೂರು: ರಾಮ ಮಂದಿರ ನಿರ್ಮಾಣದ ವೇಳೆ ಪ್ರಚಾರಕ್ಕಾಗಿ ಶ್ರೀರಾಮನ ಕೈಗಳಲ್ಲಿ ಆಯುಧಗಳಾದ ಬಿಲ್ಲು ಮತ್ತು ಬಾಣ ಇರುವ ಫೋಟೊಗಳನ್ನು ಹಲವೆಡೆ ಬಳಸಲಾಗುತ್ತಿದೆ. ಆದರೆ ಇದು ರಾಮ  ಆಕ್ರಮಣಶೀಲ ಮನೋಭಾವ ಹೊಂದಿದ್ದ ಎನ್ನುವವಂತಿದೆ. ಆದರೆ ಆತ ಹಾಗಿರಲಿಲ್ಲ ಎಂದು ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಬಿಲ್ಲು-ಬಾಣ ಹಿಡಿದ ರಾಮನ ಫೋಟೊ ಬದಲು ಪಟ್ಟಾಭಿಷಿಕ್ತ ರಾಮನ ಫೋಟೊ ಬಳಸುವುದು ಸೂಕ್ತ. ಸೀತೆ, ಲಕ್ಷ್ಮಣ, ಹನುಮಂತನಿರುವ ಪಟ್ಟಾಭಿಷೇಕದ ಚಿತ್ರ ಏಕತೆಯ ಪ್ರತೀಕವಾಗಿದೆ ಎಂದು ಮೊಯ್ಲಿಆಗ್ರಹಿಸಿದ್ದಾರೆ. ಅಲ್ಲದೇ ರಾಮ ಸೇತುವೆಗಳ ನಿರ್ಮಾಣದ ಮೂಲಕ ಸಮಾಜಕ್ಕೆ ಹಾಗೂ ಎಲ್ಲಾ ಸಮುದಾಯಕ್ಕೆ ಬೇಕಾಗಿರುವ ದೇವರಾಗಿದ್ದರು ಅವರು ಆಕ್ರಮಣಶೀಲ ಮನೋಭಾವ ಹೊಂದಿರಲಿಲ್ಲ ಎಂದಿದ್ದಾರೆ.

ಅಲ್ಲದೇ ಪ್ರಧಾನಿ ಮೋದಿ ಭೂಮಿ ಪೂಜೆಯನ್ನ ಎಲ್ಲಾ ಸಮುದಾಯಕ್ಕೆ ಒಗ್ಗಟ್ಟಾಗಿಸುವಂತೆ ಮಾಡಬೇಕು. ಯಾಕೆಂದರೆ ರಾಮ ಎಲ್ಲಾ ಸಮುದಾಯಕ್ಕೆ ಸೇರಿದವನು ಎಂದು ಕೂಡ ಕಾಂಗ್ರೆಸ್‌ನ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ. ರಾಮ ಎಲ್ಲಾ ಸಮುದಾಯಗಳಿರುವ ಸುಂದರ ಸಮಾಜದ ಕನಸು ಕಂಡವರು. ಕಾಂಗ್ರೆಸ್‌ ಕೂಡ ಯಾವತ್ತು ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT