ರಾಜ್ಯ

ಕೇವಲ 7 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ, ರಾಜ್ಯದಲ್ಲೀಗ 3,221 ಮಂದಿಗೆ ಸೋಂಕು

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆಯುತ್ತಲೇ ಇದ್ದು, ಕೇವಲ 7 ದಿನಗಳಲ್ಲಿ ಬರೋಬ್ಬರಿ 1,000ಕ್ಕೂ ಹೆಚ್ಚು ಮಂದಿ ಸೋಂಕಿಗೊಳಗಾಗಿರುವ ಆತಂಕಕಾರಿ ಬೆಳವಣಿಗೆಗಳು ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3000 ಗಟಿ ದಾಟಿದ್ದು, 3,221ಕ್ಕೆ ಏರಿಕೆಯಾಗಿದೆ. 

ಕಳೆದ ಏಳು ದಿನಗಲಲ್ಲೇ 1 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದ್ದು, ಮೊದಲ ಸಾವಿನ ಪ್ರಕರಣಗಳಿಗೆ ಬರೋಬ್ಬರಿ 66 ದಿನ ತಗೆದುಕೊಂಡಿದ್ದ ಸೋಂಕು ಎರಡರಿಂದ ಮೂರು ಸಾವಿರ ಗಡಿ ದಾಟಲು ಕೇವಲ 7 ದಿನ ತೆಗೆದುಕೊಂಡಿದೆ. 

ಭಾನುವಾರ ಸೋಂಕು ದೃಢಪಟ್ಟ 299 ಪ್ರಕರಣಗಳಲ್ಲಿ 255 ಮಂದಿ ಅಂತರ್ ರಾಜ್ಯ ಪ್ರಯಾಣಿಕರಾಗಿದ್ದು, 7 ಮಂದಿ ವಿದೇಶದಿಂದ ಆಗಮಿಸಿದವರಾಗಿದ್ದಾರೆ. ಉಳಿದಂತೆ 37 ಮಂದಿಗೆ ಸ್ಥಳೀಯವಾಗಿ ಸೋಂಕು ಹರಡಿದೆ. ಅಂತರ್ ರಾಜ್ಯ ಪ್ರಯಾಣಿಕರಲ್ಲಿ ಒಬ್ಬರು ಆಂಧ್ರಪ್ರದೇಶ, ಇಬ್ಬರು ದೆಹಲಿಯಿಂದ ಆಗಮಿಸಿದ್ದು, ಉಳಿದಂತೆ 252 ಮಂದಿ ಮಹಾರಾಷ್ಟ್ರದಿಂದಲೇ ಆಗಮಿಸಿದ್ದಾರೆ. 

ಪ್ರಸ್ತುತ 1950 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ಮಂದಿ ಐಸಿಯುನಲ್ಲಿದ್ದಾರೆ. ಈ ನಡುವೆ, ಭಾನುವಾರ ರಾಯಚೂರು ಒಬ್ಬರು ಹಾಗೂ ಬೀದರ್ ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ಅರ್ಧಶತಕ ದಾಟಿದ್ದು, 51ಕ್ಕೆ ಏರಿಕೆಯಾಗಿದೆ. 

SCROLL FOR NEXT