ರಾಜ್ಯ

ಮಹಿಳೆಯರ ಸುರಕ್ಷತೆಗೆ ಬಿಎಂಟಿಸಿಯಿಂದ ಮೈಬಿಎಂಟಿಸಿ ಆಪ್ ನಲ್ಲಿ ತುರ್ತು ಬಟನ್

Sumana Upadhyaya

ಬೆಂಗಳೂರು: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಡಿ ತನ್ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಮೈಬಿಎಂಟಿಸಿ ಅಪ್ಲಿಕೇಶನ್‌ನಲ್ಲಿ ತುರ್ತು ಬಟನ್ ನ್ನು ಆರಂಭಿಸಿದ್ದು, ಅದರ ವ್ಯವಸ್ಥೆಯನ್ನು ಬಸ್ ಗಳಲ್ಲಿ ಲೈವ್ ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ.

ಆಪ್ ಖರೀದಿಗೆ ಬಿಡ್ಡಿಂಗ್ ಕರೆದಿದ್ದ ಬಿಎಂಟಿಸಿಯ ಬಿಡ್ಡಿಂಗ್ ಅವಧಿ ನಿನ್ನೆಗೆ ಮುಗಿದಿತ್ತು. ಜೂನ್ 15ರ ಹೊತ್ತಿಗೆ ಬಿಡ್ಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮುಂದಾಗಿದ್ದು, ಎಸ್ಒಎಸ್ ಬಟನ್ ನ್ನು ಈ ತಿಂಗಳಾಂತ್ಯಕ್ಕೆ ನಡೆಸುವ ಬಗ್ಗೆ ಯೋಜನೆ ಹಾಕಿಕೊಂಡಿದೆ.

ಲಾಕ್‌ಡೌನ್ ನಿರ್ಬಂಧಗಳನ್ನು ಇತ್ತೀಚೆಗೆ ತೆಗೆದುಹಾಕಿದ ನಂತರ ಬಸ್ ಸೇವೆಗಳು ಪುನರಾರಂಭವಾದಾಗಿನಿಂದ ಪ್ರಯಾಣಿಕರು ಲೈವ್ ಟ್ರ್ಯಾಕಿಂಗ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರು ಸಲ್ಲಿಸುತ್ತಿದ್ದರು. ಬಸ್ ಸಂಚಾರ ಮಾರ್ಗಗಳಲ್ಲಿನ ಬದಲಾವಣೆ ಮತ್ತು ಬಸ್‌ಗಳ ಓಡಾಟ ಕಡಿಮೆಯಿದ್ದುದರಿಂದ ಒಂದು ವಾರ ಆ್ಯಪ್ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಬಿಎಂಟಿಸಿಆಪ್ ನ ಟೆಂಡರ್ ಅವಧಿ ಮುಗಿದಿತ್ತು, ಹೀಗಾಗಿ ಹೊಸ ಟೆಂಡರ್ ಗೆ ಕರೆದಿದ್ದೇವೆ. ಅದರಲ್ಲಿ ಹೊಸ ಲಕ್ಷಣಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಅಧಿಕಾರಿ ಸಂತೋಷ್ ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ಕಾರ್ಯದರ್ಶಿ ಸಿ ಶಿಖಾ, ರಾತ್ರಿ ಕರ್ಫ್ಯೂನಿಂದಾಗಿ ಕಳೆದ ವಾರ ಮಾರ್ಗಗಳಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಯಿತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವಾಗ ನಾವು ಹಿಂದಿನ ವ್ಯವಸ್ಥೆಗೆ ಮರಳುತ್ತೇವೆ ಎಂದರು.

ವಿದ್ಯುನ್ಮಾನ ಟಿಕೆಟ್ ಯಂತ್ರಗಳಿಗೆ ಸದ್ಯದಲ್ಲಿಯೇ ಬಿಎಂಟಿಸಿ ಟೆಂಡರ್ ಕರೆಯಲಿದೆ. ಆಂಡ್ರೋಯ್ಡ್ ಆಧಾರದ ಯಂತ್ರದಲ್ಲಿ ಕ್ಯುಆರ್ ಕೋಡ್ ಸ್ಕಾನರ್ ಗಳಿದ್ದು ಪ್ರಯಾಣಿಕರಿಂದ ಡೆಬಿಟ್, ಕ್ರೆಡಿಟ್ ಮತ್ತು ಕ್ಯಾಶ್ ವಾಲೆಟ್ ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ.

SCROLL FOR NEXT