ರಾಜ್ಯ

ಮುಂಗಾರು ಎದುರಿಸಲು ಸಜ್ಜು: ಕೊಡಗು ಜಿಲ್ಲೆಗೆ ಎನ್'ಡಿಆರ್'ಎಫ್ ಆಗಮನ

Manjula VN

ಮಡಿಕೇರಿ: ಮುಂಗಾರು ಮಳೆ ವೇಳೆ ಪ್ರವಾಹ ಹಾಗೂ ಭೂಕುಸಿತ ಉಂಟಾದರೆ ಶೀಘ್ರಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್‌ಡಿಆರ್‌ಎಫ್‌) 25 ಮಂದಿಯ ತಂಡ ಮಂಗಳವಾರ ಕೊಡಗು ಜಿಲ್ಲೆ ಆಗಮಿಸಿದೆ.

10ನೇ ಬೆಟಾಲಿಯನ್ ಪಡೆಯ ಎನ್'ಡಿಆರ್'ಎಫ್ ಪಡೆಯು ಆಂಧ್ರಪ್ರದೇಶದಿಂದ ಕೊಡಗು ಜಿಲ್ಲೆಗೆ ಆಗಮಿಸಿದ್ದು, ಈ ತಂಡವು ಆಗಸ್ಟ್ ತಿಂಗಳ ಅಂತ್ಯದವರೆಗೂ ಕೊಡಗು ಜಿಲ್ಲೆಯಲ್ಲಿಯೇ ನೆಲೆಯೂರಲಿದೆ. 

ತಂಡದ ನೇತೃತ್ವವನ್ನು ಆರ್.ಕೆ.ಉಪಾಧ್ಯಾಯ ಅವರು ವಹಿಸಿದ್ದು, ಕೊಡಗು ಜಿಲ್ಲಾ ಆಯುಕ್ತರ ಮನವಿ ಮೇರೆಗೆ ತಂಡವು ಕೊಡಗು ಜಿಲ್ಲೆಗೆ ಆಗಮಿಸಿದೆ ಎಂದು ತಿಳಿದುಬಂದಿದೆ. 

2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದ ಹಿನ್ನೆಲೆಯಲ್ಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ. 

SCROLL FOR NEXT