ರಾಜ್ಯ

ಬೆಂಗಳೂರು: ಪ್ರತಿ ಟ್ರಿಪ್ ಗೂ ಮುನ್ನ ಉಬರ್ ಟ್ಯಾಕ್ಸಿ ಸಾನಿಟೈಸ್

Lingaraj Badiger

ಬೆಂಗಳೂರು: ಪ್ರಯಾಣಿಕರ ಹಾಗೂ ಚಾಲಕನ ಸುರಕ್ಷತೆಯ ದೃಷ್ಟಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಹಭಾಗಿತ್ವದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾನಿಟೈಸರ್ ಹಬ್ ನಿರ್ಮಿಸಲಾಗಿದ್ದು, ಪ್ರತಿ ಟ್ರಿಪ್ ಗೂ ಮುನ್ನ ಉಬರ್ ಟ್ಯಾಕ್ಸಿ ಸಾನಿಟೈಸ್ ಮಾಡಲಾಗುತ್ತಿದೆ ಎಂದು ಉಬರ್ ಕಂಪನಿ ತಿಳಿಸಿದೆ.

ಉಬರ್ ಪಿಕ್ ಅಪ್ ಝೋನ್ ನಲ್ಲಿ ಸಾನಿಟೈಸರ್ ಹಬ್ ಸ್ಥಾಪಿಸಲಾಗಿದೆ. ದೆಹಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣದಲ್ಲೂ ಇದೇ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಉಬರ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಉಬರ್ ಸಂಪರ್ಕ ರಹಿತ ಸೇವೆಯನ್ನು ಒದಗಿಸುತ್ತಿದ್ದು, ಪ್ರಯಾಣಿಕರಿಗೆ ಡಿಜಿಟಲ್ ಪಾವತಿಗೆ ಅವಕಾಶ ನೀಡಿದೆ. ಅಲ್ಲದೆ ಚಾಲಕ ಮತ್ತು ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಉಬರ್ ತಿಳಿಸಿದೆ.

ಸಾನಿಟೈಸ್ ಮಾಡಿದ ಕಾರಿನ ಬಾಗಿಲು ಮತ್ತು ಡಿಕ್ಕಿ ತೆರೆಯಲು ಚಾಲಕನಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

SCROLL FOR NEXT