ರಾಜ್ಯ

ಪಾರಂಪರಿಕ ತಾಣಗಳ ಪಟ್ಟಿಗೆ 5 ಸ್ಥಳಗಳ ಸೇರ್ಪಡೆಗೆ ಸಿದ್ಧತೆ

Srinivas Rao BV

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ, ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ ಸೇರಿದಂತೆ ಒಟ್ಟು 5 ಪ್ರದೇಶಗಳನ್ನು ಪಾರಂಪರಿಕ ತಾಣಗಳಿಗೆ ಸೇರ್ಪಡೆಗೊಳಿಸಲು ವಿಶ್ವ ಪರಿಸರ ದಿನಾಚರಣೆಯ ವೇಳೆ ಅರಣ್ಯ ಇಲಾಖೆ ಹಾಗೂ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ. 

ಉತ್ತರ ಕನ್ನಡದ ಶಿರಸಿಯ ಸೋಂದಾ ಬಳಿ ಇರುವ ಮುಂಡಿಗೆಕೆರೆ ಸಣ್ಣ ಸರೋವರವಾಗಿದ್ದು, ಈ ಪ್ರದೇಶವನ್ನು ಪಾರಂಪರಿಕ ತಾಣ ಎಂದು ಗುರುತಿಸಲು ಸ್ಥಳೀಯ ಪಂಚಾಯತ್ ನಲ್ಲಿ 3 ತಿಂಗಳ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಈಗಾಗಲೇ ಈ ಪ್ರದೇಶವನ್ನು ಪಕ್ಷಿಧಾಮ ಎಂದು ಗುರುತಿಸಲಾಗಿದ್ದು, ಇದೇ ಸರಣಿಯಲ್ಲಿ ಇನ್ನೂ 10 ಸರೋವರಗಳನ್ನು ರಕ್ಷಿಸಲು ಮಂಡಳಿ ನಿರ್ಧರಿಸಿದೆ.  

ಜೀವವೈವಿಧ್ಯ ಮಂಡಳಿಯ ಸದಸ್ಯರು ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ, ರಾಮನಗರ, ಚಿಕ್ಕಮಗಳೂರಿನ ಗುಡ್ಡಗಳನ್ನು ಪಾರಂಪರಿಕ ತಾಣಗಳಿಗೆ ಸೇರಿಸಲು ಕ್ರಮ ಕೈಗೊಂಡಿದ್ದಾರೆ. 

ಬೋರ್ಡ್ ನ ಅಧ್ಯಕ್ಷ ಅನಂತ್ ಹೆಗ್ಡೆ ಈ ಬಗ್ಗೆ ಮಾತನಾಡಿದ್ದು, ಈ ಎಲ್ಲಾ ಪ್ರದೇಶಗಳನ್ನು ಪಾರಂಪರಿಕ ಸ್ಥಳಗಳನ್ನಾಗಿ ಘೋಷಿಸುವವರೆಗೂ ಸ್ಥಳೀಯ ಆಡಳಿತಕ್ಕೆ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಶಿವಮೊಗ್ಗದ ಅಂಬರಗುಡ್ಡ, ಬೆಂಗಳೂರಿನ ಗಾಂಧಿ ಜಿಕೆವಿಕೆ, ದೇವನಹಳ್ಳಿಯ ನಲ್ಲೂರು ಹುಣಸೆ ತೋಪು, ಚಿಕ್ಕಮಗಳೂರಿನ ಹೊಗ್ರೆಕನ್ ಗಳನ್ನು ಈಗಾಗಲೇ ಪಾರಂಪರಿಕ ತಾಣಗಳನ್ನಾಗಿ ಘೋಷಣೆ ಮಾಡಲಾಗಿದೆ. 

SCROLL FOR NEXT