ರಾಜ್ಯ

ಕೊರೋನಾ ಭೀತಿ: ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸದ್ಯಕ್ಕಿಲ್ಲ ಭಕ್ತರಿಗೆ ಪ್ರವೇಶ

Vishwanath S

ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜೂ. 8ರಿಂದ ದೇಗುಲಗಳನ್ನು ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿದ್ದರೂ, ಚಿಕ್ಕಮಗಳೂರು ಜಿಲ್ಲೆಯ ಅನ್ನಪೂರ್ಣೇಶ್ವರದ ದೇಗುಲದ ಭಕ್ತರಿಗೆ ಸದ್ಯ ದೇವರ ದರ್ಶನದ ಭಾಗ್ಯ ಇಲ್ಲ. 

ಕೋವಿಡ್-19 ತಡೆಗಟ್ಟಲು ದೇಗುಲದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕಿರುವುದರಿಂದ ದೇಗುಲಕ್ಕೆ ಆಗಮಿಸುವ ಭಕ್ತರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ದೇವರ ದರ್ಶನ, ಪೂಜೆ ಮತ್ತು ವಾಸ್ತವ್ಯದ ಅವಕಾಶಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ದೇವಸ್ತಾನದ ಪ್ರಕಟಣೆ ತಿಳಿಸಿದೆ. 

ಲಾಕ್ ಡೌನ್ ಸಮಯದಲ್ಲಿ ನಡೆಸುತ್ತದ್ದಂತೆಯೇ ಫೇಸ್ ಬುಕ್ ನಲ್ಲಿ ಲೈವ್ ನಲ್ಲಿ ಆನ್ ಲೈನ್ ಮಂಗಳಾರತಿ ದರ್ಶನದ ವ್ಯವಸ್ಥೆಯನ್ನು ಮುಂದುವರಿಸಲಾಗುವುದು. ಜನರು ದೇಗುಲದ ವೆಬ್ ಸೈಟ್ ಇಲ್ಲವೇ ಕಚೇರಿಗೆ ನೇರ ಕರೆ ಮಾಡಿ ಸೇವೆಗಳನ್ನು ಮಾಡಿಸಬಹುದು ಎಂದು ಪ್ರಕಟಣೆ ಮಾಹಿತಿ ನೀಡಿದೆ.

SCROLL FOR NEXT