ರಾಜ್ಯ

ಕಲ್ಲುಬಂಡೆ ಸ್ಫೋಟ: ಕೂದಲೆಳೆ ಅಂತರದಲ್ಲಿ ಪಾರಾದ ಸಚಿವ ನಾರಾಯಣಗೌಡ

Srinivasamurthy VN

ಮಂಡ್ಯ:

ರಸ್ತೆ ಬದಿಯ ಕಲ್ಲು ಬಂಡೆ ಬ್ಲಾಸ್ಟ್ ನಿಂದ ಸಂಭವಿಸುತ್ತಿದ್ದಅಪಾಯದಿಂದ ತೋಟಗಾರಿಕೆ ಹಾಗೂ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡ ಸೇರಿದಂತೆ ನಾಲ್ವರು ಪಾರಾಗಿರುವ ಘಟನೆ ನಾಗಮಂಗಲದ ಬಂಕಾಪುರದ ಬಳಿ  ಇಂದು ನಡೆದಿದೆ.

ಬೆಂಗಳೂರು -ಜಲಸೂರು ರಸ್ತೆಗಾಗಿ ನಡೆಯುತ್ತಿರುವ ಕಾಮಗಾರಿಯ ವೇಳೆ ಕಲ್ಲು ಬಂಡೆ  ಸಿಡಿಸಲು ಹಗಲು ವೇಳೆಯೇ ಬ್ಲಾಸ್ಟಿಂಗ್ ಮಾಡಲಾಗಿತ್ತು,ಇದೇ ಸಮಯಕ್ಕೆ ಮಾರ್ಗವಾಗಿ  ಸಚಿವ ಕೆ.ಸಿ.ನಾರಾಯಣಗೌಡರು ಕೆ.ಆರ್.ಪೇಟೆಗೆ ತೆರಳುತ್ತಿದ್ದರು,ಈ ವೇಳೆಯೇ ಬ್ಲಾಸ್ಟ್ ಮಾಡಿಸಿದ ಕಲ್ಲುಗಳು ಸಚಿವರಿದ್ದ ಕಾರಿನ ಬಳಿಯೇ ಬಿದ್ದಿವೆ, ಇದರಿಂದ ಆಕ್ರೋಶಗೊಂಡ ಸಚಿವ ನಾರಾಯಣಗೌಡರು ಕಲ್ಲು ಬ್ಲಾಸ್ಟ್ ಮಾಡುವ ವೇಳೆ ರಸ್ತೆ ಸಂಚಾರ ಬಂದ್ ಮಾಡಿಸದೆ, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಕಲ್ಲುಬಂಡೆ ಬ್ಲಾಸ್ಟ್ ಮಾಡುವ ಮೂಲಕ ಬೇಜವಾಬ್ದಾರಿ ತೋರಿದ ಗುತ್ತಿಗೆದಾರನ ವಿರುದ್ದ ಹರಿಹಾಯ್ದಿದ್ದಾರೆ.

ತಕ್ಷಣವೆ ಗುತ್ತಿಗೆದಾರನನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.  ಸಚಿವರ ಸೂಚನೆ ಮೇರೆಗೆ ಕೆಶಿಫ್ ರಸ್ತೆ ಕಾಮಗಾರಿ ನಡೆಸ್ತಿದ್ದ ಮೈಸೂರಿನ ಗುತ್ತಿಗೆದಾರ ಶ್ರೀನಿವಾಸ್ ರಾಜ್ ಪೋಲೀಸರ ವಶಕ್ಕೆಪಡೆದಿದ್ದಾರೆ.
ಸ್ಥಳೀಯರು ರಸ್ತೆಗೆ ಬಿದ್ದ ಬಂಡೆಯನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಟ್ಟ ನಂತರ ಸಚಿವರು ತೆರಳಿದರು ಎನ್ನಲಾಗಿದೆ. ಈ ಸಂಬಂಧ ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ನಾಗಯ್ಯ

SCROLL FOR NEXT