ರಾಜ್ಯ

50 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್ ನೌಕರರಿಗೆ ಕಳೆದ 8 ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ!

Sumana Upadhyaya

ಬೆಂಗಳೂರು: ರಾಜ್ಯದ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳ ಸಾವಿರಾರು ಮಂದಿ ನೌಕರರಿಗೆ ಕಳೆದ 8 ತಿಂಗಳಿನಿಂದ ವೇತನ ಬಂದಿಲ್ಲ. ರಾಜ್ಯದಲ್ಲಿ 6 ಸಾವಿರದ 081 ಗ್ರಾಮ ಪಂಚಾಯತ್ ಗಳಿದ್ದು ಅದರಲ್ಲಿ ಕನಿಷ್ಠವೆಂದರೂ 50 ಸಾವಿರ ಮಂದಿ ಬಿಲ್ ಕಲೆಕ್ಟರ್, ವಾಟರ್ ಮೆನ್, ಅಂಕಿ ಅಂಶ ಸಂಗ್ರಾಹಕರು ಮತ್ತು ಅಟೆಂಡರ್ ಆಗಿ ಕರ್ತವ್ಯದಲ್ಲಿದ್ದಾರೆ.

ಇವರಲ್ಲಿ ಬಹುತೇಕ ಮಂದಿ ಲಾಕ್ ಡೌನ್ ಸಮಯದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಗ್ರಾಮಗಳಲ್ಲಿ ಜನರಲ್ಲಿ ಅರಿವು ಮೂಡಿಸುವುದು, ಆರೋಗ್ಯ ಕಿಟ್ ಗಳನ್ನು ಪೂರೈಸುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದರು. ಪಿಡಿಒಗಳಿಗೆ ವೇತನ ಬರುತ್ತಿದೆ, ಆದರೆ ಉಳಿದ ಸಿಬ್ಬಂದಿಗೆ ಕಳೆದ ಏಳೆಂಟು ತಿಂಗಳಿನಿಂದ ಬಂದಿಲ್ಲ ಎನ್ನುತ್ತಾರೆ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು. ಸರ್ಕಾರದಿಂದ ಹಣ ಬಿಡುಗಡೆಯಾಗಬೇಕಷ್ಟೆ ಎನ್ನುತ್ತಾರೆ ಅವರು.

ಸ್ಥಳೀಯವಾಗಿ ಸಂಗ್ರಹಿಸಲಾದ ಹಣದಿಂದ ಈ ಹಿಂದೆ ಗ್ರಾಮ ಪಂಚಾಯತ್ ನೌಕರರಿಗೆ ವೇತನ ನೀಡಲಾಗುತ್ತಿತ್ತು. ಅದರಲ್ಲಿ ಕಡಿಮೆಯಾದಾಗ 2018ರ ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ ಸಿಬ್ಬಂದಿಗೆ ನೇರವಾಗಿ ವೇತನ ನೀಡಲಾರಂಭಿಸಿತು. ಈ ಸಂಬಂಧ ತಾಲ್ಲೂಕಿನ ಮತ್ತು ಗ್ರಾಮ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಪತ್ರದ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು ಸರ್ಕಾರದ ಗಮನಕ್ಕೆ ಈ ವಿಷಯ ಬಂದಿದೆ ಎಂದು ಗ್ರಾಮ ಪಂಚಾಯತ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೇಳಿದ್ದಾರೆ.

SCROLL FOR NEXT