ರಾಜ್ಯ

ವಕೀಲರಾದ ಸಂಸದ ತೇಜಸ್ವಿ ಸೂರ್ಯ; ಹೈಕೋರ್ಟ್‌ ನಲ್ಲಿ ಇಂದು ವಾದ ಮಂಡನೆ

Srinivas Rao BV

ಬೆಂಗಳೂರು: ಸಂಸದರಾದ ನಂತರ ಇದೇ ಮೊದಲ ಬಾರಿಗೆ ತೇಜಸ್ವಿ ಸೂರ್ಯ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನ ಸುಮಾರು 45,000 ಠೇವಣಿದಾರರ ಪರವಾಗಿ ಶುಕ್ರವಾರ ತೇಜಸ್ವಿ ಸೂರ್ಯ ವಾದ ಮಂಡಿಸಿದರು. ಅವರು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿರುವ ಅರ್ಜಿದಾರ ಡಾ.ಎನ್.ಆರ್.ರವಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಬ್ಯಾಂಕ್ ನ ನಿರ್ದೇಶಕರುಗಳು ಠೇವಣಿದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

SCROLL FOR NEXT