ರಾಜ್ಯ

ಬಳ್ಳಾರಿ: ನಿಯಮ ಗಾಳಿಗೆ ತೂರಿ ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್ ಪುತ್ರನ ಅದ್ಧೂರಿ ಮದುವೆ, ದೂರು ದಾಖಲು

Vishwanath S

ಬಳ್ಳಾರಿ: ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಾಹದಲ್ಲಿ 50ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮಗಳಲ್ಲಿ ಗಾಳಿಗೆ ತೂರಿ ಮಾಜಿ ಸಚಿವರ ಪುತ್ರನ ಅರಕ್ಷತೆಯೊಂದು ನಡೆದಿದೆ.

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ಹೂವಿನಹಡಗಲಿ ಶಾಸಕ‌ ಪಿ.ಟಿ.ಪರಮೇಶ್ವರ ನಾಯ್ಕ ಅವರ ಪುತ್ರನ ಮದುವೆಯಲ್ಲಿ ಕೋವಿಡ್ ಎಸ್ಒಪಿ ನಿಯಮಗಳ ಉಲ್ಲಂಘಿಸಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
50ಕ್ಕಿಂತ ಹೆಚ್ಚು ಜನರು ಮದುವೆಯಲ್ಲಿ ಪಾಲ್ಗೊಳ್ಳಬಾರದು.ಅಲ್ಲದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾಸ್ಕ ಧರಿಸುವಿಕೆ ಕಡ್ಡಾಯಗೊಳಿಸಲಾಗಿದೆ‌. ಇದ್ಯಾವುದು ಕಟ್ಟುನಿಟ್ಟಾಗಿ ಮದುವೆಯಲ್ಲಿ ಪಾಲಿಸದ ಹಿನ್ನೆಲೆಯಲ್ಲಿ ಎಸ್ಒಪಿ ನಿಯಮವನ್ನು ಅವರು ಉಲ್ಲಂಘಿಸಿದ್ದಾರೆ.

ಈ ಕುರಿತು ಮಾಜಿ ಸಚಿವ ಪರಮೇಶ್ವರ ನಾಯ್ಕ ಪ್ರತಿಕ್ರಿಯಿಸಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ನನ್ನ ಪುತ್ರನ ಮದುವೆ ಮುಂದೂಡಲಾಗಿತ್ತು. ಅಲ್ಲದೇ, ಕಲ್ಯಾಣ ಮಂಟಪಗಳು ದೊರಕಲಿಲ್ಲ. ಹೀಗಾಗಿ ಸ್ವ ಗ್ರಾಮದಲ್ಲಿ ಪುತ್ರನ ಮದುವೆ ಮಾಡಿದ್ದೇನೆ ಎಂದರು.
ಮದುವೆಯಲ್ಲಿ ಹೆಚ್ಚು ಜನ ಸೇರಿದ್ದರಿಂದ ನಿಯಮ ಉಲ್ಲಂಘನೆ ಆಗಿರುವುದು ನಿಜ. ಇದಕ್ಕಾಗಿ ಫೊಲೀಸರು ನೋಟಿಸ್ ನೀಡಿದ್ದಾರೆ. ನಾನು ಯಾರ ಬಗ್ಗೆಯೂ ಆರೋಪ‌ ಮಾಡುವುದಿಲ್ಲ. ನನ್ನ ಮೇಲಿ‌ನ ಪ್ರೀತಿಗೊಸ್ಕರ ಜನ ಜಾಸ್ತಿ ಬಂದಿದ್ದಾರೆ. ಯಾರಿಗೂ ಕೊರೊನಾ ಬರುವುದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಸಚಿವರ ಮದುವೆಯಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಸೇರಿ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಗಣ್ಯ ವ್ಯಕ್ತಿಗಳೇ ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ್ದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

SCROLL FOR NEXT