ರಾಜ್ಯ

ಭೀತಿ ಸೃಷ್ಟಿಸಿದ ಕಾರ್ಪೋರೇಟರ್ ಭಾಷಣ: ಬಸವನಗುಡಿ ಸುತ್ತಮುತ್ತಲೂ ಮಿನಿ ಲಾಕ್ ಡೌನ್

Shilpa D

ಬೆಂಗಳೂರು: ಬಸವನಗುಡಿ ಕಾರ್ಪೋರೇಟರ್ ಸತ್ಯನಾರಾಣ ಮಾಡಿದ್ದ ಭಾಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಜವರಲ್ಲಿ ಆತಂಕ ಸೃಷ್ಟಿಸಿದೆ. ಸುತ್ತಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಸೋಮವಾರದವರೆಗೂ ಮಿನಿ ಲಾಕ್ ಡೌನ್ ಸೃಷ್ಟಿಯಾಗಿತ್ತು.

ತ್ಯಾಗರಾಜನಗರ, ಶ್ರೀನಗರ, ಹನುಮಂತನಗರಗಳಲ್ಲಿ  ಹಲವು ಮಂದಿ ಕೊರೋನಾ ಪೀಡಿತರಾಗಿದ್ದಾರೆ, ಎನ್ ಆರ್ ಕಾಲೋನಿ ಮತ್ತು ತ್ಯಾಗರಾಜನಗರ ಜನತೆ ಹೆಚ್ಚಿನ ಗಮನವಹಿಸಿ ಎಂದು ಕಟ್ಟೆ ಸತ್ಯನಾರಾಯಣ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.

ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ಹೇಳಿದ್ದ ಸಂದೇಶ ಜನರಲ್ಲಿ ಆತಂಕ ಮತ್ತು ಭಯ .ಮೂಡಿಸಿತ್ತು. ರಸ್ತೆಗಳೆಲ್ಲಾ ಬಂದ್  ಆಗಿವಾಣಿಜ್ಯ ಮಳಿಗೆಗಳು ಕೂಡ ಕ್ಲೋಸ್ ಆಗಿದ್ದವು. ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನ ಅವಶ್ಯಕತೆಯಿದ್ದರೇ ಮಾತ್ರ ಮನೆಯಿಂದ ಹೊರಬರಬೇಕು ಎಂದು ಹೇಳಲಾಗಿತ್ತು. 

ಭೀತಿಯಿಂದಾಗಿ ತ್ಯಾಗರಾಜನಗರ ಶ್ರೀನಗರ, ಹನುಮಂತನಗರ, ಕತ್ರಿಗುಪ್ಪೆ ಮತ್ತು ಗಾಂಧಿ ಬಜಾರ್ ನಲ್ಲಿ ಮಿನಿ ಲಾಕ್ ಡೌನ್ ಸೃಷ್ಟಿಯಾಗಿತ್ತು. ಬಸವನಗುಡಿಯಲ್ಲಿಯೂ ಕೊರೋನಾ ಕೇಸ್ ಗಳಿದ್ದು, ಲಾಕ್ ಡೌನ್ ತೆಗೆಯಲಾಗಿದೆ. ನಾನು ಯಾರಲ್ಲೂ ಭಯ ಸೃಷ್ಟಿಸಿಲ್ಲ, ಹೋಟೆಲ್ ಗಳ ಮುಂದೆ ಜನ ಗುಂಪು ಗುಂಪಾಗಿ ನಿಂತು ತಿನ್ನುತ್ತಿದ್ದರು, ಹಿಗಾಗಿ ಜಾಗ್ರತೆ ಮೂಡಿಸುವ ಕೆಲಸ ಮಾಡಿದೆ ಎಂದು ಸತ್ಯನಾರಾಯಣ ಸ್ಪಷ್ಟ ಪಡಿಸಿದ್ದಾರೆ.

SCROLL FOR NEXT