ರಾಜ್ಯ

ಹುಲಿ ವಿಷ ಪ್ರಾಶನ ಪ್ರಕರಣ ಬೇಧಿಸುವಲ್ಲಿ ತಮಿಳುನಾಡಿಗೆ ಕರ್ನಾಟಕದ ಪಶುವೈದ್ಯರ ನೆರವು!

Nagaraja AB

ಬೆಂಗಳೂರು: ಹುಲಿ ವಿಷಪ್ರಾಶನ ಪ್ರಕರಣಗಳನ್ನು ಬೇಧಿಸುವಲ್ಲಿ ಕರ್ನಾಟಕದ ಪಶುವೈದ್ಯರು ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಹಾಯ ಮಾಡಲಿದ್ದಾರೆ.

ಇತ್ತೀಚಿಗೆ ಅಣ್ಣಾಮಲೈ ಮತ್ತು ಮುದುಮಲೈ ಹುಲಿ ಸಂರಕ್ಷಿತ ಅರಣ್ಯ ವಲಯಗಳಲ್ಲಿ ಹುಲಿ ಹಾಗೂ ಕಾಡು ಹಂದಿ ವಿಷ ಪ್ರಾಶನ ಪ್ರಕರಣಗಳನ್ನು ಹೊಸ ತಂತ್ರಜ್ಞಾನ ಕಾಗದ ಆಧಾರಿತ ಸ್ಟ್ರಿಪ್ ವಿಧಾನ ಮೂಲಕ ಬೇಧಿಸಿದ ಬಳಿಕ ಈ ಸಂಬಂಧ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ಕಳ್ಳ ಬೇಟೆಗಾರರನ್ನು ಬಂಧಿಸುವಲ್ಲಿಯೂ ಈ ಹೊಸ ಸಂತ್ರಜ್ಞಾನ ನೆರವು ನೀಡುತ್ತಿದೆ.ಈ  ತಂತ್ರಜ್ಞಾನವನ್ನು ಬಳಸಿಕೊಂಡು ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೃತಪಟ್ಟಿದ್ದ ಹುಲಿ ಹಾಗೂ ಕಾಡು ಹಂದಿಯಲ್ಲಿ ಹೆಚ್ಚಿನ ಪ್ರಮಾಣದ ಮೊನೊಕ್ರೊಟೊಫಾಸ್ ಕೀಟನಾಶಕ ಸೇವಿಸಿರುವುದನ್ನು ಪಶು ವೈದ್ಯರು ಪತ್ತೆ ಮಾಡಿದ್ದರು.

ಹೊಸ ತಂತ್ರಜ್ಞಾನವನ್ನು  ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡಿದ್ದು, ಇದೀಗ ಇದರೊಂದಿಗೆ ಕೆಲಸ ಮಾಡಲು ಮಾಡಲು ತಮಿಳುನಾಡು ಅರಣ್ಯ ಇಲಾಖೆ ನಿರ್ಧರಿಸಿದೆ. 

ಆರಂಭದಲ್ಲಿ ಹೊಸ ತಂತ್ರಜ್ಞಾನದಿಂದ ಫಲಿತಾಂಶ ಪಡೆಯಲು ಮೂರರಿಂದ ನಾಲ್ಕು ದಿನಗಳು ಬೇಕಾಗುತಿತ್ತು. ಆದರೆ, ಈಗ ಕೆಲವೇ ತಾಸುಗಳಲ್ಲಿ ವಿಷಯ ಗೊತ್ತಾಗಲಿದೆ. ಈ ತಂತ್ರಜ್ಞಾನ ಬಳಸಿಕೊಳ್ಳಲು ತಮಿಳುನಾಡು ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರದ ನಡುವೆ ಸದ್ಯದಲ್ಲಿಯೇ ಒಪ್ಪಂದವೇರ್ಪಡಲಿದೆ ಎಂದು ವಿಧಿವಿಜ್ಞಾನ ತಜ್ಞ ಡಾ.ಪ್ರಯಾಗ್ ಎಚ್ ಎಸ್ ತಿಳಿಸಿದ್ದಾರೆ. 

ಕಳೆದ ತಿಂಗಳು ತಮಿಳುನಾಡಿನಲ್ಲಿ   ಮೂರು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಪ್ರಕರಣವನ್ನು  ಕರ್ನಾಟಕ ಬಗೆಹರಿಸಿದ ಬಳಿಕ ಪರೀಕ್ಷೆ ಹಾಗೂ ಫಲಿತಾಂಶಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ. ಈ ಪ್ರಕರಣದಿಂದ ನಾಲ್ಕು ಅರಣ್ಯಾ ಅಧಿಕಾರಿಗಳು ಅಮಾನತುಗೊಂಡಿದ್ದಾರೆ.ವಿಷ ಪ್ರಾಶನ ಮಾದರಿಗಳ ತಪಾಸಣೆ ಕುರಿತಂತೆ ತಮಿಳುನಾಡಿನ ಅಡ್ವಾನ್ಸ್ಡ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಸಮಗ್ರ ವಿವರ ಕೇಳಿದೆ ಎಂದು ಡಾ. ಪ್ರಯಾಗ್ ಹೇಳಿದ್ದಾರೆ.

SCROLL FOR NEXT