ರಾಜ್ಯ

ಕೊರೋನಾ ನಿಯಮ ಪಾಲಿಸುತ್ತಿರುವ ಬಿಎಂಟಿಸಿ: ಡೋಂಟ್ ಕೇರ್ ಎಂದ ಪ್ರೈವೇಟ್ ಬಸ್!

Shilpa D

ಬೆಂಗಳೂರು: ಕೊರೋನಾ ಲಾಕ್ ಡೌನ್ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಚಾರಕ್ಕಾಗಿ ಸಾರಿಗೆ ಇಲಾಖೆ  ಎಲ್ಲಾ ನಿಯಮಗಳನ್ನು ಪಾಲಿಸುವುದಾಗಿ  ಭರವಸೆ ನೀಡಿತ್ತು. ಆದರೆ ಖಾಸಗಿ ಬಸ್ ಗಳು ಯಾವುದೇ ನಿಯಮಗಳನ್ನು ಗಾಳಿಗೆ ತೂರಿದೆ.

ಸುಮಾರು 2 ,ತಿಂಗಳಿಂದ ರಸ್ತೆಗಿಳಿಯದ ಖಾಸಗಿ ಬಸ್ ಗಳು ಮತ್ತೆ ಸಂಚಾರಕ್ಕೆ ಮುಕ್ತವಾಗಿವೆ. ಆದರೆ ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ, ನಿಯಮಗಳ ಪ್ರಕಾರ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರು 30 ಮಂದಿ ಮಾತ್ರ ಇರಬೇಕು.ಮತ್ತು ಪ್ರಯಾಣಿಕರು ಬಸ್ ನಲ್ಲಿ ನಿಲ್ಲುವಂತಿಲ್ಲ, ಆದರೆ ಖಾಸಗಿ ಬಸ್ ಗಳು ಸರ್ಕಾರದ ರೂಲ್ಸ್ ಗೆ ಡೋಂಟ್ ಕೇರ್ ಎನ್ನುತ್ತಿವೆ.

ವಿಶೇಷವಾಗಿ ಗಾರ್ಮೆಂಟ್ಸ್ ನೌಕರರು ಮತ್ತು ಕಾರ್ಮಿಕರು ಖಾಸಗಿ ಬಸ್ ಗಳಲ್ಲಿ ತುಂಬಿ ತುಳುಕುತ್ತಿರುತ್ತಾರೆ. ಬಿಎಂಟಿಸಿ ಬಸ್ ನಲ್ಲಿ ನಿಗದಿತ ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಆದರೆಖಾಸಗಿ ಬಸ್ ಗಳಲ್ಲಿ ಯಾವುದೇ ಮಿತಿಯಿಲ್ಲ, ಜೊತೆಗೆ ಬಿಎಂಟಿಸಿ ಬಸ್ ಗಾಗಿ ಕಾಯಲು ಸಮಯ ಇಲ್ಲದ ಕಾರಣ ಖಾಸಗಿ ಬಸ್ ಗಳಲ್ಲೇ ಸಂಚರಿಸುವುದಾಗಿ ಗಾರ್ಮೆಂಟ್ಸ್ ಉದ್ಯೋಗಿ ಆಶಾ ಎಂಬುವರು ತಿಳಿಸಿದ್ದಾರೆ.

ಜೊತೆಗೆ ಸರ್ಕಾರಿ ಬಸ್ ಗಿಂತ ಖಾಸಗಿ ಬಸ್ ಗಳು ಫಾಸ್ಟ್ ಆಗಿ ತೆರಳುತ್ತೇವೆ, ಹೀಗಾಗಿ ಖಾಸಗಿ ಬಸ್ ಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಕೆಲವು ನೌಕರರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಅನೇಕ ಖಾಸಗಿ ಬಸ್ ಗಳು ಹೆಚ್ಚಾಗಿ ಸಿಟಿ ರಸ್ತೆಗಳಲ್ಲಿ ಸಂಚರಿಸುವುದಿಲ್ಲ, ಈ ಬಗ್ಗೆ ನಾವು ಗಮನ ಹರಿಸುತ್ತೇವೆ ಎಂದು ಸಾರಿಗೆ ಆಯುಕ್ತ ಎನ್ ಶಿವಕುಮಾರ್ ಹೇಳಿದ್ದಾರೆ.

SCROLL FOR NEXT