ರಾಜ್ಯ

ಹೋಮ್ ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ವಹಿಸಲು 'ಸ್ಮಾರ್ಟ್ ಸಿಟಿ' ಕಣ್ಗಾವಲು ತಂಡಗಳ ರಚನೆ

Nagaraja AB

ಬೆಂಗಳೂರು: ಬೆಂಗಳೂರು: ಹೋಮ್ ಕ್ವಾರಂಟೈನ್ ನಲ್ಲಿರುವ ಜನರು ನಿಯಮಗಳನ್ನು ಉಲ್ಲಂಘಿಸದಂತೆ ನಿಗಾ ವಹಿಸಲು 50 'ಸ್ಮಾರ್ಟ್ ಸಿಟಿ' ಕಣ್ಗಾವಲು ತಂಡಗಳನ್ನು  ಬಿಬಿಎಂಪಿ ಹಾಗೂ ರಾಜ್ಯ ಆರೋಗ್ಯ ಇಲಾಖೆ ರಚಿಸಿದೆ.

ಸಾಂಸ್ಥಿಕ ಕ್ವಾರಂಟೈನ್ ಗೆ ಸ್ಥಳಾಂತರಿಸಿದ ಬಳಿಕ ಕೊರೋನಾ ಪಾಸಿಟಿವ್ ಇರುವ ಜನರನ್ನು ಪತ್ತೆ ಹಚ್ಚುವ ಕಾರ್ಯವನ್ನು ಈ ಸ್ಮಾರ್ಟ್ ಸಿಟಿ ತಂಡಗಳು ಮಾಡಲಿವೆ. ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಗಳ ಪತ್ತೆಗಾಗಿ 20 ಗಂಟೆಗಳು ಬೇಕಾಗುತ್ತದೆ. ಆದರೆ, ಈ ತಂಡಗಳಿಂದ ಪತ್ತೆ ಹಚ್ಚುವ ಸಮಯ ಕಡಿಮೆಯಾಗಲಿದೆ. 

ಆದರೆ, ಈವೆಲ್ಲ ಕಾರ್ಯಗಳು ಸಮರ್ಪಕ ಪರೀಕ್ಷೆ ಆದಾಗ ಮಾತ್ರ ನಡೆಯಲಿದೆ. ಉತ್ತರಹಳ್ಳಿಯ ಅರೆಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ವೊಂದನ್ನು ಉದಾಹರಣೆಯಾಗಿ ನೀಡುವ ಸ್ಥಳೀಯ ನಿವಾಸಿ ಸಿ. ಕುಮಾರ್, ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. ಆದರೆ, ಅಪಾರ್ಟ್ ಮೆಂಟಿನ ಇತರ ಮಹಡಿಗಳಲ್ಲಿರುವ ಜನರನ್ನು ಪರೀಕ್ಷೆಗೆ ಒಳಪಡಿಸಿಲ್ಲ, ಯಾರೊಬ್ಬರ ಮಾದರಿ ಸಂಗ್ರಹವನ್ನು ಕೂಡಾ ಮಾಡಿಲ್ಲ, 21 ದಿನಗಳ  ಹೋಮ್ ಕ್ವಾರಂಟೈನ್  ವ್ಯವಸ್ಥೆಯೂ ಇಲ್ಲ, ಯಾವುದೇ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಕಾರ್ಯಕರ್ತರು ಬಂದು ನಮ್ಮನ್ನು ಕೋರಿಲ್ಲ, ಮಾದರಿ ಸಂಗ್ರಹಿಸಿಲ್ಲ, ಪರಿಸ್ಥಿತಿ ಈ ರೀತಿಯಲ್ಲಿರುವಾಗ ತಂಡಗಳನ್ನು ರಚಿಸಿರುವುದರಿಂದ ಯಾವುದೇ ಪ್ರಯೋಜನವಾಗಲ್ಲ ಎನ್ನುತ್ತಾರೆ.

ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಮೇಯರ್ ಗೌತಮ್ ಕುಮಾರ್  ಮತ್ತು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಮಾರ್ಟ್ ಸಿಟಿ ತಂಡಗಳು ಹಾಗೂ ವಾಹನಗಳಿಗೆ ಚಾಲನೆ ನೀಡಿದರು. 

ನಿಯಮಗಳನ್ನು ಉಲ್ಲಂಘಿಸುವವರು ಈ ತಂಡಗಳು ಪತ್ತೆ ಹಚ್ಚಲಿವೆ. ನಾಗರಿಕರು ಕೂಡಾ register.quarantinesquad.in ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಸ್ಮಾರ್ಟ್ ಸಿಟಿ ತಂಡಗಳು ಹಾಗೂ ಅಧಿಕಾರಿಗಳೊಂದಿಗೆ ಕೆಲಸ ಮಾಡಬಹುದು ಎಂದು ಅನಿಲ್ ಕುಮಾರ್ ತಿಳಿಸಿದರು.

ಇತರ ರಾಜ್ಯಗಳಿಂದ ಬಂದು ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸುವವರು ಹಾಗೂ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ಬಗ್ಗೆ ದೊಡ್ಡ ಆತಂಕವಿದೆ. ಇಂತಹ ಜನರನ್ನು ಈ ತಂಡಗಳು ಪತ್ತೆ ಹಚ್ಚಲಿದ್ದು, ಎಫ್ ಐಆರ್ ದಾಖಲಿಸಲಿವೆ. ನಂತರ ಸಾಂಸ್ಥಿಕ ಕ್ವಾರಂಟೈನ್ ಗೆ ಕರೆದುಕೊಂಡು ಹೋಗಲಿದ್ದಾರೆ. ಇತರ ಹೊರತಾಗಿ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ, ಕ್ವಾರಂಟೈನ್ ನಲ್ಲಿರುವವರ ಸ್ಥಿತಿಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಅವರು ಹೇಳಿದರು. 

SCROLL FOR NEXT