ರಾಜ್ಯ

ರಾಜ್ಯದಲ್ಲಿ ಪ್ರತಿಧ್ವನಿಸುತ್ತಿದೆ 'ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್': ಬಳ್ಳಾರಿಯ ಡೇನಿಮ್ ಜೀನ್ಸ್'ಗಳ ಮೇಲೆ ಮಾಯವಾಗಲಿದೆ ಬ್ಲ್ಯೂ ಮಾರ್ಕ್

Manjula VN

ಬಳ್ಳಾರಿ: ಲಡಾಖ್ ಸಂಘರ್ಷದ ಬಳಿಕ ಚೀನಾ ವಿರುದ್ಧ ಆಕ್ರೋಶಗಳು ವ್ಯಕ್ತವಾಗತೊಡಗಿದ್ದು, ರಾಜ್ಯದಲ್ಲೂ ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್ (ಚೀನಾ ವಸ್ತುಗಳನ್ನು ನಿಷೇಧಿಸಿ) ಧ್ವನಿ ಏರತೊಡಗಿದೆ. ಇದರಂತೆ ಬಳ್ಳಾರಿಯ ಪ್ರತಿಷ್ಟಿದ ಡೇನಿಮ್ ಜೀನ್ಸ್ ಚೀನಾ ವಸ್ತುಗಳನ್ನು ಬಳಕೆ ಮಾಡದಿರಲು ನಿರ್ಧರಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಬಳ್ಳಾರಿಯಲ್ಲಿ ಡೇನಿಮ್ ಜೀನ್ಸ್'ನ 500 ಕಾರ್ಖಾನೆಗಳಿದ್ದು, ಈ ಎಲ್ಲಾ ಕಾರ್ಖಾನೆಗಳೂ ಚೀನಾದ ಕಚ್ಚಾ ವಸ್ತುಗಳ ಮೇಲೆ ಅವಲಂಬಿತವಾಗಿದ್ದವು. ಇದೀಗ ಚೀನಾ ವಸ್ತುಗಳನ್ನು ಕೈಬಿಡಲು ಕಂಪನಿ ನಿರ್ಧರಿಸಿದ್ದು, ಕಚ್ಚಾ ವಸ್ತುಗಳಿಗಾಗಿ ಇತರೆ ದೇಶಗಳತ್ತ ಮುಖ ಮಾಡಿದೆ. 

ನಮ್ಮ ವ್ಯವಹಾರಗಳಿಗಿಂತಲೂ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ. ಹೀಗಾಗಿ ನಾವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾವಸ್ತುಗಳನ್ನು ನಿಲ್ಲಿಸಿ ಇದೀಗ ಉತ್ತರ ಕೊರಿಯಾ, ತೈವಾನ್ ನಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದೇವೆಂದು ಡೇನಿಮ್ ಕಾರ್ಖಾನೆ ಮಾಲೀಕರು ಹೇಳಿದ್ದಾರೆ. 

ಯಾವುದೇ ಪರಿಸ್ಥಿತಿಯಾದರೂ ನಮಗೆ ನಮ್ಮ ದೇಶ ಮೊದಲು. ನಮಗೆ ನಮ್ಮ ದೇಶ ಎಲ್ಲದನ್ನೂ ನೀಡಿದೆ. ಇತ್ತೀಚಿನ ಚೀನಾ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಎಲ್ಲಾ ಕಚ್ಚಾ ವಸ್ತುಗಳನ್ನು ಕೂಡಲೇ ಸ್ಥಗಿತಗೊಳಿಸುತ್ತಿದ್ದೇವೆ. ಚೀನಾ ವಸ್ತುಗಳನ್ನು ನಿಷೇಧಿಸಿದರೆ ಭಾರತದ ಶಕ್ತಿ ಏನೆಂಬುದು ಅವರಿಗೆ ತಿಳಿಯಲಿದೆ ಎಂದು ತಿಳಿಸಿದ್ದಾರೆ. 

SCROLL FOR NEXT