ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೋನಾ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 197 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ನಗರದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 1279ಕ್ಕೆ ಏರಿಕೆಯಾಗಿದೆ. ಅಂತೆಯೇ ನಗರದಲ್ಲಿ ಸೋಂಕಿನಿಂದ ಗುಣಮುಖರಾದ ಒಟ್ಟಾರೆ ಸೋಂಕಿತರ ಸಂಖ್ಯೆ 378ರಷ್ಟಿದೆ. ನಿನ್ನೆ ಬೆಂಗಳೂರಿನಲ್ಲಿ ಒಟ್ಟು ಇಬ್ಬರು ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ನಗರದಲ್ಲಿ ಒಟ್ಟಾರೆ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.
ಈ ಪೈಕಿ 68 ಸಕ್ರಿಯ ಕೇಸ್ಗಳು, 85 ಜನ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 15 ಜನ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಪಶ್ಚಿಮದಲ್ಲಿ ಒಟ್ಟು 144 ಕೊರೋನಾ ಕೇಸ್ಗಳು ಪತ್ತೆಯಾಗಿವೆ. ಈ ಪೈಕಿ 39 ಸಕ್ರಿಯ ಕೇಸ್, 94 ಜನ ಡಿಸ್ಚಾರ್ಜ್ ಅಗಿದ್ದು, ಇಲ್ಲಿ ಒಟ್ಟು 11 ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ಒಟ್ಟು 136 ಕೊರೋನಾ ಪ್ರಕರಣಗಳಲ್ಲಿ 96 ಸಕ್ರಿಯ ಕೇಸ್ ಗಳಿದ್ದು, 28 ಜನ ಡಿಸ್ಚಾರ್ಜ್ ಆಗಿದ್ದು, 8 ಜನ ಮೃತಪಟ್ಟಿದ್ದಾರೆ. ರಾಜರಾಜೇಶ್ವರಿ ನಗರ ವಲಯದಲ್ಲಿ ಒಟ್ಟು 23 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 12 ಸಕ್ರಿಯ ಪ್ರಕರಣಗಳು ಮತ್ತು 5 ಜನ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿ ಕೂಡ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 137 ಕೊರೋನಾ ಕೇಸ್ಗಳಿದ್ದು, ಅದರಲ್ಲಿ 57 ಸಕ್ರಿಯ ಕೇಸ್ ಗಳು, 74 ಸೋಂಕಿತರು ಡಿಸ್ಚಾರ್ಜ್, 6 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಮಹದೇವಪುರ ವಲಯದಲ್ಲಿ ಒಟ್ಟು 54 ಕೊರೋನಾ ಪ್ರಕರಣಗಳಿವೆ. ಈ ಪೈಕಿ 27 ಸಕ್ರಿಯ ಕೇಸ್ ಗಳಿದ್ದು, 27 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಯಲಹಂಕ ವಲಯದಲ್ಲಿ ಒಟ್ಟು 21 ಕೊರೋನಾ ಕೇಸ್ಗಳಿದ್ದು, ಇದರಲ್ಲಿ 15 ಸಕ್ರಿಯ ಪ್ರಕರಣ, 5 ಜನ ಡಿಸ್ಚಾರ್ಜ್, ಓರ್ವ ಸಾವನ್ನಪ್ಪಿದ್ದಾರೆ.
ದಾಸರಹಳ್ಳಿ ವಲಯದಲ್ಲಿ ಒಟ್ಟು 10 ಕೊರೋನಾ ಪ್ರಕರಣಗಳಿದ್ದು, 9 ಸಕ್ರಿಯ ಪ್ರಕರಣ, ಓರ್ವ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ಹೊರವಲಯದಲ್ಲಿ 42 ಕೊರೋನಾ ಪ್ರಕರಣಗಳಲ್ಲಿ 30 ಸಕ್ರಿಯ ಪ್ರಕರಣ, 6 ಜನ ಡಿಸ್ಚಾರ್ಜ್, 6 ಜನ ಸಾವನ್ನಪ್ಪಿದ್ದಾರೆ.
ಉಳಿದಂತೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಗೆ ಒಳಪಡದೆ ಇರುವ ಏರಿಯಾಗಳಲ್ಲಿ ಒಟ್ಟು 16 ಕೊರೋನಾ ಕೇಸ್ ಗಳು ದಾಖಲಾಗಿದ್ದು. ಈ ಪೈಕಿ 9 ಸಕ್ರಿಯ ಪ್ರಕರಣಗಳಿವೆ. 7 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.