ಸುಪ್ರೀಯಾ, ಪ್ರಸನ್ನಜೋಷಿ 
ರಾಜ್ಯ

ಬಳ್ಳಾರಿ: ಒಡಹುಟ್ಟಿದ ಅಣ್ಣ-ತಂಗಿಯನ್ನು ಮತ್ತೆ ಒಂದುಗೂಡಿಸಿದ ಕೋವಿಡ್-19

ಕೋವಿಡ್-19 ಸಾಂಕ್ರಾಮಿಕ ಹಲವು ವರ್ಷಗಳಿಂದ ಬೇರೆ ಬೇರೆಯಾಗಿದ್ದ ಅಣ್ಣ- ತಂಗಿಯನ್ನು ಮತ್ತೆ ಒಂದುಗೂಡಿಸಿದೆ. ಮಹಾರಾಷ್ಟ್ರದ ಲಾಟೂರಿನಿಂದ 2016ರಿಂದಲೂ ಕಾಣೆಯಾಗಿದ್ದ ಸುಪ್ರೀಯಾ ಇತ್ತೀಚಿಗೆ ಬಳ್ಳಾರಿಯಲ್ಲಿ ಪತ್ತೆಯಾಗಿದ್ದು, ಅಣ್ಣ ಪ್ರಸನ್ನ ಜೋಷಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಬಳ್ಳಾರಿ: ಕೋವಿಡ್-19 ಸಾಂಕ್ರಾಮಿಕ ಹಲವು ವರ್ಷಗಳಿಂದ ಬೇರೆ ಬೇರೆಯಾಗಿದ್ದ ಅಣ್ಣ- ತಂಗಿಯನ್ನು ಮತ್ತೆ ಒಂದುಗೂಡಿಸಿದೆ. ಮಹಾರಾಷ್ಟ್ರದ ಲಾಟೂರಿನಿಂದ 2016ರಿಂದಲೂ ಕಾಣೆಯಾಗಿದ್ದ ಸುಪ್ರೀಯಾ ಇತ್ತೀಚಿಗೆ ಬಳ್ಳಾರಿಯಲ್ಲಿ ಪತ್ತೆಯಾಗಿದ್ದು, ಅಣ್ಣ ಪ್ರಸನ್ನ ಜೋಷಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಕಾಣೆಯಾಗಿದ್ದ ತನ್ನ ತಂಗಿಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಮಹಾರಾಷ್ಟ್ರದ ಧಾರ್ಮಿಕ ಸ್ವಯಂ ಸೇವಾ ಸಂಸ್ಥೆಯೊಂದರ ನೌಕರನಾಗಿರುವ ಪ್ರಸನ್ನ ಜೋಷಿ, ಬಳ್ಳಾರಿಗೆ ಬಂದು, ತನ್ನ ಒಡಹುಟ್ಟಿದ ಸಹೋದರಿಯನ್ನು ಭೇಟಿ ಮಾಡುವ ಮೂಲಕ ಸಂತಸಪಟ್ಟಿದ್ದಾರೆ.

ಮಾರ್ಚ್ ತಿಂಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಪಾಸಣೆ ನಡೆಸುವಾಗ ಸುಪ್ರೀಯಾ ವಸತಿ ಹೀನಳಾಗಿದ್ದು, ಮಾನಸಿಕ ಅಸ್ವಸ್ಥೆ ಎಂಬುದು ತಿಳಿದುಬಂದಿತ್ತು. ನಂತರ ವಿಮ್ಸ್ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದು ಕೋವಿಡ್-19 ಪರೀಕ್ಷೆ ನಡೆಸಿದ ಬಳಿಕ ನೆಗೆಟಿವ್ ಬಂದಿತ್ತು. ತದನಂತರ ಶಾಂತಿ ಧಾಮ ಆರ್ಪೆಂಜ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಿ,ಆಕೆಯ ಕುಟುಂಬದ ಹಿನ್ನೆಲೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸುಪ್ರಿಯಾ ಜೊತೆಗೆ ಅಲ್ಲಿನ ಸಿಬ್ಬಂದಿ ಮಾತುಕತೆ ನಡೆಸಿದ್ದಾರೆ.

ಆಕೆ ಮಾನಸಿಕ ಅಸ್ವಸ್ಥೆಯಿಂದ ಪೂರ್ಣ ಪ್ರಮಾಣದ ಚೇತರಿಕೆ ಕಷ್ಟ ಸಾಧ್ಯ ಎಂದು ಅರಿತು ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸಂಬಂಧಿಕರ ಪತ್ತೆಯಾಗಿ ಫೋಸ್ಟ್ ಹಾಕಲು ತೀರ್ಮಾನಿಸಿದ್ದೇವು.ಜೂನ್ ಮೊದಲ ವಾರದಲ್ಲಿ ಸುಪ್ರೀಯಾ ಸಹೋದರ ಪ್ರಸನ್ನ ಜೋಷಿ, ಬಳ್ಳಾರಿಗೆ ಬಂದು ನಮ್ಮನ್ನು ಸಂಪರ್ಕಿಸಿದ್ದಾರೆ. ಕ್ವಾರಂಟೈನ್  ಮುಗಿದ ಬಳಿಕ ನೆಗೆಟಿವ್ ವರದಿ ಬಂದಿದ್ದರಿಂದ ಅವರ ತಂಗಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಈ ಮೂಲಕ ಇಬ್ಬರನ್ನು ಮತ್ತೆ ಒಂದುಗೂಡಿಸಲಾಯಿತು ಎಂದು ಶಾಂತಿಧಾಮದ ಹಿರಿಯ ಸಮಾಲೋಚಕರೊಬ್ಬರು ತಿಳಿಸಿದ್ದಾರೆ.

ಅಣ್ಣ- ತಂಗಿ ಮತ್ತೆ ಒಂದುಗೂಡಿದ್ದರಿಂದ ತುಂಬಾ ಸಂತೋಷವಾಗಿದೆ. ಎಲ್ಲಾ ಕ್ರೆಡಿಟ್ ಆಸ್ಪತ್ರೆ ಹಾಗೂ ಆರ್ಪೆಂಜ್ ಸಿಬ್ಬಂದಿಗೆ ಸಲ್ಲಬೇಕೆಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹೇಳಿದರು.

ಕಳೆದ ಕೆಲ ವರ್ಷಗಳಲ್ಲಿ ಗೋಕರ್ಣ ಮತ್ತು ಗೋವಾ ಭೇಟಿ ಬಗ್ಗೆ ಆಕೆ ಹೇಳಿಕೆ ನೀಡಿದ್ದರಿಂದ ಆಕೆ ಮನೆಯಿಂದ ಹೊರಗೆ ಬಂದಿರುವುದಾಗಿ ಖಾತ್ರಿಯಾಗಿ ಆಕೆಯ ಕುಟುಂಬಸ್ಥರ ಪತ್ತೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಲು ನಿರ್ಧರಿಸಲಾಯಿತು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಆರ್ .ನಾಗರಾಜ್ ಹೇಳಿದರು.

ತಂಗಿಯ ಜೊತೆಗೆ ಮತ್ತೆ ಒಂದುಗೂಡಿದ್ದಕ್ಕಾಗಿ ಬಳ್ಳಾರಿ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ ಪ್ರಸನ್ನ ಜೋಷಿ, ನಮ್ಮ ಪೋಷಕರು 2013ರಲ್ಲಿ ನಿಧನರಾದರು. ನಂತರ ಆಘಾತಗೊಂಡಿದ್ದ ಸುಪ್ರೀಯಾ, ಕ್ಷುಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಬಂದಿದಳು.ಈಗ ಆಕೆಯನ್ನು ಪತ್ತೆ ಮಾಡಲಾಗಿದ್ದು, ತನ್ನ ಸಂತೋಷವನ್ನು ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT