ರಾಜ್ಯ

ತುಮಕೂರು: ಮಾವು ಹಣ್ಣಿನ ವ್ಯಾಪಾರಿ, ಬಟ್ಟೆ ಮಾರುತ್ತಿದ್ದ ಮಹಿಳೆಗೆ ಕೋವಿಡ್-19 ಸೋಂಕು

Nagaraja AB

ತುಮಕೂರು: ಉತ್ತರ ಭಾರತ ಮತ್ತು ಮುಂಬೈಗಳಿಗೆ ಹಣ್ಣುಗಳನ್ನು ರವಾನಿಸಲಾಗುತ್ತಿದ್ದ ಚೇಳೂರು ಮಾವು ಮತ್ತು ಹಲಸಿನ ಹಣ್ಣು ಮಾರುಕಟ್ಟೆಯ 50 ವರ್ಷದ ವ್ಯಾಪಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 18 ಜನರನ್ನು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇಡಲಾಗಿದೆ.28 ಮಂದಿ ದ್ವಿತೀಯ ಸಂಪರ್ಕಿತರನ್ನು ಮನೆಯಲ್ಲಿ  ಪ್ರತ್ಯೇಕಿಸಲಾಗಿದೆ. 

ಬಟ್ಟೆಗಳನ್ನು ಮಾರಾಟ ಮಾಡುವ ಸಲುವಾಗಿ ನೆರೆಯ ಆಂಧ್ರಪ್ರದೇಶಕ್ಕೆ ಹೋದ ಮಹಿಳಾ ವ್ಯಾಪಾರಿಗೂ ಕೋವಿಡ್-19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

8 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು,11 ಸಕ್ರಿಯ ಪ್ರಕರಣಗಳಿವೆ.ಈವರೆಗೂ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು, 39 ಜನರು ಗುಣಮುಖರಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT