ರಾಜ್ಯ

12 ಭಯೋತ್ಪಾದನಾ ಪ್ರಕರಣಗಳ ವಿರುದ್ಧ ಎನ್ಐಎ ಚಾರ್ಜ್'ಶೀಟ್

Manjula VN

ಬೆಂಗಳೂರು: ನಗರದ ಸುದ್ದಗಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಇಸಿಸ್ ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮಂಗಳವಾರ ಚೆನ್ನೈ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 

ಮೊಹಮ್ಮದ್ ಹನೀಫ್ ಖಾನ್, ಇಮ್ರಾನ್ ಖಾನ್, ಮೊಹಮ್ಮದ್ ಝೈದ್, ಇಜಾಜಾ ಪಾಷಾ, ಹುಸೇನ್ ಷರೀಫ್, ಖ್ವಾಜಾ ಮೊಹಿದ್ದೀನ್, ಮೆಹಬೂಬ್ ಪಾಷಾ ಸೇರಿ 12 ಮಂದಿ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಲಾಗಿದೆ. 

ಶಂಕಿತರು ತಮಿಲುನಾಡಿನ ಹಿಂದು ಮುಖಂಡ ಸುರೇಶ್ ಹತ್ಯೆ ಬಳಿಕ ಬೆಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. 

ಖ್ವಾಜಾ ಮೊಹಿದ್ದೀನ್ ಅಲಿಯಾಸ್ ಜಲಾಲ್ ತನ್ನ ಸಹಚರರ ಜೊತೆ ಸೇರಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹಲವು ಬಾರಿ ಸಭೆ ನಡೆಸಿದ್ದರು. 

ಕೋಮುಗಲಭೆ ಹಾಗೂ ದೇಶ ವಿರೋಧಿ ಚಟುವಟಿಕೆ ನಡೆಸಲು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿದ್ದರು. ಅಲ್ಲದೆ, ನಕಲಿ ದಾಖಲೆ ನೀಡಿ ಸಿಮ್ ಕಾರ್ಡ್ ಗಳನ್ನು ಬಳಸಿದ್ದರು. ಇದೇ ರೀತಿ ಹಲವು ಸಿಮ್ ಗಳನ್ನು ಪಡೆದಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. 

ಶಂಕಿತರು ಗುರಪ್ಪನ ಪಾಳ್ಯದಲ್ಲಿದ್ದ ಬಗ್ಗೆ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಮೆಹಬೂಬ್ ಪಾಷಾ ದಕ್ಷಇಣ ಭಾರತದಲ್ಲಿ ಐಸಿಸ್ ಸಂಘಟನೆಯ ಕಟ್ಟಬೇಕೆಂದು ನಿರ್ಧರಿಸಿದ್ದ. ಎಲ್ಲರನ್ನೂ ಒಟ್ಟುಗೂಡಿಸಿ ಸಬೆ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು. ನಂತರ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.

SCROLL FOR NEXT