ರಾಜ್ಯ

ಕಲಬುರ್ಗಿಗೆ 837 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ

Srinivasamurthy VN

ಕಲಬುರ್ಗಿ: ಕಲಬುರ್ಗಿ ನಗರಕ್ಕೆ 837 ಕೋಟಿ ರೂಪಾಯಿ ಕುಡಿಯುವ ನೀರಿನ ಯೋಜನೆಕಲಬುರ್ಗಿ ನಗರಕ್ಕೆ 24x7 ಕಾಮಗಾರಿಗೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಿರುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ. 

ಕಲಬುರ್ಗಿಯಲ್ಲಿ ನಗರ ಪ್ರದಕ್ಷಿಣೆ ಮಾಡಿದ ನಂತರ ಮಾತನಾಡಿದ ಅವರು, 837 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಜಲ ಶುದ್ಧೀಕರಣ ಘಟಕದಲ್ಲಿಯೂ ಹೊಸ ಯಂತ್ರೋಪಕರಣ ಅಳವಡಿಕೆ ಮಾಡಲಾಗುವುದು ಎಂದರು.

ಎಸ್.ಟಿ.ಪಿ ಪ್ಲಾಂಟ್ ನೀರು ನೇರವಾಗಿ ಭೀಮಾ ನದಿಗೆ ಬಿಡುವುದು ಅಪರಾಧ. ನೀರನ್ನು ಕಲಬುರ್ಗಿಯ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಮತ್ತು ಅಪ್ಪನ ಕೆರೆ ತುಂಬಿಸಲು ಬಳಕೆ ಮಾಡಿಕೊಳ್ಳಲಾಗುವುದು. 10 ಕೋಟಿ ರೂಪಾಯಿ ವೆಚ್ಚದಲ್ಲಿ ಅಪ್ಪನ ಕೆರೆ ಸೌಂದರೀಕರಣ ಮಾಡಲಾಗುವುದು. ಸಚಿವನಾಗಿ ಯಾವ ಕಾರಣಕ್ಕೂ ಮಲಗುವ ಕೆಲಸ ಮಾಡಲ್ಲ. ಏನೆಲ್ಲ ಕಾಮಗಾರಿಗಳಿವೆಯೋ ಅವೆಲ್ಲಕ್ಕೂ ವೇಗ ನೀಡಲಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಗೊಳಿಸೋ ಲೇಔಟ್ ಗಳಲ್ಲಿ ಶೇ 5 ರಷ್ಟು ನಿವೇಶನ ಪತ್ರಕರ್ತರಿಗೆ ಮೀಸಲಿಡಲಾಗುವುದು ಎಂದು ಹೇಳಿದರು.

SCROLL FOR NEXT