ರಾಜ್ಯ

ಕೊರೋನಾ ಸಂಕಟದ ನಡುವೆ ಬೆಳ್ಳಿ ಗೆರೆ: ಬೆಂಗಳೂರು ವಾಯು ಮಾಲಿನ್ಯ ದಾಖಲೆ ಪ್ರಮಾಣದಲ್ಲಿ ಇಳಿಕೆ

Raghavendra Adiga

ಬೆಂಗಳೂರು: ಕೊರೋನಾವೈರಸ್ ಮಹಾಮಾರಿಯ ಸಂಕತದ ನಡುವೆ ಒಂದು ಚಿಕ್ಕ ಸಂತಸದ ಬೆಳ್ಳಿಗೆರೆ ಮೂಡಿದೆ. ಲಾಕ್ ಡೌನ್  ಸಮಯದಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯವು ಶೇಕಡಾ 28 ರಷ್ಟು ಕಡಿಮೆಯಾಗಿದೆ  ಎಂದು ಇತ್ತೀಚಿನ ವಿಶ್ಲೇಷಣೆ ತಿಳಿಸಿದೆ. ಆರೋಗ್ಯ ಮತ್ತು ಪರಿಸರ ಒಕ್ಕೂಟ(Health and Environment Alliance) ಮತ್ತು ಜಾಗತಿಕ ಹವಾಮಾನ ಮತ್ತು ಆರೋಗ್ಯ ಒಕ್ಕೂಟದ(Global Climate and Health Alliance) ಪರವಾಗಿ ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಮತ್ತು ಕ್ಲೀನ್ ಏರ್ ಇದನ್ನು ವರದಿ ಮಾಡಿದೆ. 2019 ರಲ್ಲಿ ಹೆಲ್ದಿ ಏರ್ ಕೋಅಲೇಷನ್ ಪ್ರಾರಂಭವಾಗಿದ್ದು ಇದು ನಗರದಲ್ಲಿ ವಾಯು ಗುಣಮಟ್ಟದ ಮಾನಿಟರ್ ಗಳನ್ನು ಸ್ಥಾಪಿಸಿದೆ.

ಲಾಕ್‌ಡೌನ್ ಮೊದಲು 45 ದಿನಗಳ ಅವಧಿಯ ಡೇಟಾವನ್ನು ಲಾಕ್‌ಡೌನ್ ಸಮಯದಲ್ಲಿ 45 ದಿನಗಳ ಅವಧಿಯ ಡೇಟಾದೊಂದಿಗೆ ಹೋಲಿಸಲಾಗಿ  ನಗರದಾದ್ಯಂತ ಮಾಲಿನ್ಯ ಮಟ್ಟದಲ್ಲಿ ವ್ಯತ್ಯಾಸ ಕಂಡಿದೆ. ಇದರಲ್ಲಿ ಹಲಸೂರು ಆಸ್ಪತ್ರೆಯಲ್ಲಿಕಡಿಮೆ ವ್ಯತ್ಯಾಸವಾಗಿದ್ದರೆ (ಶೇಕಡಾ 14) ಬೆಳ್ಳಂದೂರು ಕೆರೆ ಪರಿಸರದಲ್ಲಿ ದೊಡ್ಡ ವ್ಯತ್ಯಾಸಗಳು (ಶೇಕಡಾ 75 ಗೋಚರವಾಗಿದೆ. ಹೆಲ್ದಿ ಏರ್ ಕೋಅಲೇಷನ್ ಸಂಯೋಜಕರಾದ ಐಶ್ವರ್ಯಾ ಸುಧೀರ್, “ಪಿಎಂ 2.5 ನಿಂದ ಮಾಲಿನ್ಯವನ್ನು ಸರಾಸರಿ ಕಾಲು ಭಾಗಕ್ಕಿಂತಲೂ ಕಡಿಮೆ ಮಾಡಲಾಗಿದೆ ಎಂದು ತೋರುತ್ತದೆ. ಕೆಲವು ಸ್ಥಳಗಳಲ್ಲಿ ಗಾಳಿಯ ಗುಣಮಟ್ಟವು ವಿಶ್ವ ಆರೋಗ್ಯ ಸಂಸ್ಥೆ ಸುರಕ್ಷಿತ ಮಟ್ಟವನ್ನು ಪೂರೈಸಿದೆ. ಇದು ಕಳೆದ ಎರಡು ದಶಕಗಳಲ್ಲಿ ಮೊದಲ ಬಾರಿಯಾಗಿದೆ." ಎಂದಿದ್ದಾರೆ.

ಭಾರತ ಲಾಕ್‌ಡೌನ್‌ನ ಮೊದಲ 45 ದಿನಗಳಲ್ಲಿ ಬೆಂಗಳೂರಿನಲ್ಲಿ ಪಿಎಂ 2.5 ಮಟ್ಟಕ್ಕೆ ಸಂಬಂಧಿಸಿದಂತೆ ಕಡಿಮೆ ಮಾಲಿನ್ಯ ಪ್ರಮಾಣ ದಾಖಲಾದ ಮೂರು ಪ್ರದೇಶಗಳೆಂದರೆ ಬೆಳ್ಲಂದೂರು ಕೆರೆ ಸಮೀಪದ ಪ್ರದೇಶ, ವರ್ತೂರು ಕೆರೆ ಸಮೀಪದ ಪ್ರದೇಶ ಹಾಗೂ ಹೊಸೂರು ರಸ್ತೆ ಹಾಗೂ ಔಟರ್ ರಿಂಗ್ ರಸ್ತೆ ವ್ಯಾಪ್ತಿಯ ಪ್ರದೇಶಗಳಾಗಿದೆ. 

SCROLL FOR NEXT