ರಾಜ್ಯ

22 ಬಿಎಂಟಿಸಿ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಅದೃಷ್ಟವಶಾತ್ ಪ್ರಯಾಣಿಕರಿಗೆ ತಟ್ಟದ ಸೋಂಕು!

Shilpa D

ಬೆಂಗಳೂರು: ಬಿಎಂಟಿಸಿಯ ಸುಮಾರು 22 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಆದರೆ ಅದೃಷ್ಟ ವಶಾತ್ ಒಬ್ಬೇ ಒಬ್ಬ ಪ್ರಯಾಣಿಕನಿಗೂ ಸೋಂಕು ತಗುಲಿಲ್ಲ.

ಇಬ್ಬರು ನಿರ್ವಾಹಕರು, ಮೂರು ಕಂಡಕ್ಟರ್ ಕಮ್ ಡ್ರೈವರ್, 7 ಚಾಲಕರಿಗೆ ಸೋಂಕು ತಗುಲಿದ್ದು ಶುಕ್ರವಾರ ಒಂದೇ ದಿನ 6 ಹೊಸ ಪ್ರಕರಣಗಳು ಪತ್ತೆಯಾಗಿವೆ. ಐವರು ಸಿಬ್ಬಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 17 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಹೀಗಾಗಿ ಬಿಎಂಟಿಸಿ ಎಲ್ಲಾ ಸಿಬ್ಬಂದಿಗೂ ಸಾಮೂಹಿಕ ಕೊರೋನಾ ಪರೀಕ್ಷೆ  ನಡೆಸಲು ನಿರ್ಧರಿಸಿದೆ.

ಸೋಂಕಿತ ಸಿಬ್ಬಂದಿಗಳ ಸಂಪರ್ಕಗಳನ್ನು ಕಂಡುಹಿಡಿಯಲು ತಂಡವು ಮಾರ್ಗ ಸಂಖ್ಯೆ ಮತ್ತು ಸಮಯದ ಕುರಿತು ಅಧಿಸೂಚನೆಗಳನ್ನು ಹೊರಡಿಸುತ್ತದೆ ಎಂದು ಕಮ್ಯುನಿಟಿ ನೋಡಲ್ ಅಧಿಕಾರಿ ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.

ಸದ್ಯ ನಮ್ಮ ತಂಡ ಮೊಬೈಲ್ ಟವರ್ಸ್ ಮೂಲಕ ಪತ್ತೆ ಹಚ್ಚಲು ಯತ್ನಿಸುತ್ತಿದೆ. ಇದಕ್ಕಾಗಿ ವ್ಯಕ್ತಿಯೊಬ್ಬರು ಆ ಪಾಯಿಂಟ್ ನಲ್ಲಿ ಸುಮಾರು 15 ನಿಮಿಷಗಳ ಕಾಲ ಇರಬೇಕು, ಆದರೆ  ಬಸ್ ನಿಲ್ದಾಣ ತಲುಪುವವರೊ ಅಷ್ಟು ಸಮಯ ಎಲ್ಲಿಯೂ ನಿಲ್ಲುವುದಿಲ್ಲ , ಹೀಗಾಗಿ  ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಮೊಬೈಲ್ ಸಂಖ್ಯೆ ನೀಡದಿರುವ ಪ್ರಯಾಣಿಕರನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟದ ಕೆಲಸವಾಗಿದೆ, ಪ್ರಯಾಣಿಕರು ಮುಂದೆ ಬಂದು ಅವರ ಮೊಬೈಲ್ ನಂಬರ್ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಜಿ ಶ್ರೀನಿವಾಸ್ ಹೇಳಿದ್ದಾರೆ.
 

SCROLL FOR NEXT