ಸಿಸಿಟಿವಿ ದೃಶ್ಯ 
ರಾಜ್ಯ

ಮಂಗಳೂರಲ್ಲಿ ಅಮಾನವೀಯ ಕೃತ್ಯ: ಲಾಡ್ಜ್ ನಲ್ಲಿದ್ದ ತಂದೆಯನ್ನು ಕಾಲು ಹಿಡಿದು ಹೊರಕ್ಕೆ ಎಳೆದುಕೊಂಡು ಬಂದ ಮಗ!

ಕಡಲ ನಗರಿ ಮಂಗಳೂರಿನಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಮಗನೊಬ್ಬ  ಲಾಡ್ಜ್‌ನಲ್ಲಿ ತಂಗಿದ್ದ ತಂದೆಯನ್ನು ಮೊದಲ ಮಹಡಿಯಿಂದ ಕಾಲುಗಳನ್ನು ಹಿಡಿದು ದರದರನೆ ನೆಲಮಹಡಿಯವರೆಗೆ ಎಳೆದೊಯ್ದಿದ್ದಾನೆ. ಮಂಗಳೂರು ದೇರಳಕಟ್ಟೆ  ಖಾಸಗಿ ಲಾಡ್ಜ್‌ನಲ್ಲಿ ಜೂನ್ 29 ರ ಸೋಮವಾರ ಈ ಘಟನೆ ನಡೆದಿದೆ.

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಮಗನೊಬ್ಬ  ಲಾಡ್ಜ್‌ನಲ್ಲಿ ತಂಗಿದ್ದ ತಂದೆಯನ್ನು ಮೊದಲ ಮಹಡಿಯಿಂದ ಕಾಲುಗಳನ್ನು ಹಿಡಿದು ದರದರನೆ ನೆಲಮಹಡಿಯವರೆಗೆ ಎಳೆದೊಯ್ದಿದ್ದಾನೆ. ಮಂಗಳೂರು ದೇರಳಕಟ್ಟೆ  ಖಾಸಗಿ ಲಾಡ್ಜ್‌ನಲ್ಲಿ ಜೂನ್ 29 ರ ಸೋಮವಾರ ಈ ಘಟನೆ ನಡೆದಿದೆ.

15 ದಿನಗಳ ಹಿಂದೆ ಮುಂಬೈನಿಂದ ಮಂಗಳೂರಿಗೆ ಬಂದಿದ್ದರಿಂದ ತಂದೆ ಖಾಸಗಿ ಲಾಡ್ಜ್‌ನಲ್ಲಿದ್ದರು. ಅವರಿಗೆ ಲಾಡ್ಜ್‌ಗೆ ತೆರಳುವ ಮುನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ತಂದೆ ಮತ್ತು ಮಗ ಇಬ್ಬರೂ ಉಪ್ಪಳ ಮೂಲದವರು ಮತ್ತು ಮಗನ ಅಮಾನವೀಯ ಕ್ರಿಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು ಸ್ಥಳೀಯರೂ ಕೂಡ ಈ ಕೃತ್ಯಕ್ಕೆ ತಡೆಯೊಡ್ಡಲಿಲ್ಲ ಎನ್ನುವುದು ಖೇದದ ಸಂಗತಿ.

ಘಟನೆಯ ನಂತರ ಮಗ ನಾಪತ್ತೆಯಾಗಿದ್ದಾಗಿ ವರದಿಯಾಗಿದೆ. ಸಾರ್ವಜನಿಕರು ಪ್ರಥಮ ಚಿಕಿತ್ಸೆ ನೀಡುವ ಮೂಲಕ ನೊಂದ ತಂದೆಗೆ ಸಹಾಯ ಮಾಡಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT