ರಾಜ್ಯ

ಕೆ.ಆರ್.ಪೇಟೆ:  ಹುಚ್ಚು ನಾಯಿ ಕಡಿತ, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

Raghavendra Adiga

ಮಂಡ್ಯ:  ಹುಚ್ಚು ನಾಯಿಯೊಂದು ಓರ್ವ ಪುರಸಭಾ ನೌಕರ ಸೇರಿದಂತೆ ಸುಮಾರು ೧೦ಕ್ಕೂ ಹೆಚ್ಚು ಮಂದಿಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ವಿವಿಧ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.

ಪಟ್ಟಣದ ಜಯನಗರ, ಮುಸ್ಲಿಂ ಬ್ಲಾಕ್, ತಮ್ಮಣ್ಣಗೌಡ ನಗರ, ಬಸವೇಶ್ವರನಗರ, ಪೊಲೀಸ್ ಠಾಣೆಯ ಮುಖ್ಯ ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ  ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದ ಹುಚ್ಚು ನಾಯಿಯೊಂದು ದಾರಿಯಲ್ಲಿ ಸಿಕ್ಕ ಪುರಸಭೆಯ ನೌಕರ ಶಶಿ, ಜಯನಗರ ಬಡಾವಣೆಯ ಸುಪ್ರಿಯ, ಹೆಮ್ಮನಹಳ್ಳಿಯ  ಪ್ರತಾಪ್ ಮತ್ತು ಗಗನ ಹಾಗೂ ನಾಲ್ಕು ಮಕ್ಕಳು ಸೇರಿದಂತೆ ೧೦ಕ್ಕೂ  ಮಂದಿಗೆ ಕಚ್ಚುವ ಮೂಲಕ ಗಂಭೀರವಾಗಿ ಗಾಯಗೊಳಿಸಿದೆ. 

ಗಾಯಾಳುಗಳೆಲ್ಲರೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಯನಗರ ಬಡಾವಣೆಯ ಸುಪ್ರಿಯ ಎಂಬುವವರಿಗೆ ಬಾಯಿಯ ಭಾಗಕ್ಕೆ ಕಚ್ಚುವ ಮೂಲಕ ಜನರಲ್ಲಿ ಆತಂಕದ ವಾತಾವರಣ ನಿರ್ಮಿಸಲಿರುವ ಹುಚ್ಚು ನಾಯಿಯನ್ನು ಹಿಡಿದು ಕೊಂದು ಹಾಕುವ ಮೂಲಕ ಜನರ ಪ್ರಾಣ ರಕ್ಷಣೆಗೆ  ಪುರಸಭೆಯ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಹಾಗೂ ಪುರಸಭೆಯ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ  ಬೀದಿ ನಾಯಿಗಳ ಹಾವಳಿಯು ಹೆಚ್ಚಾಗಿದೆ, ಹಿಂಡು ಹುಂಡಾಗಿ ಮುಖ್ಯ ರಸ್ತೆಗಳಲ್ಲಿಯೇ ಸುತ್ತಾಡುತ್ತಿವೆ ಹಾಗಾಗಿ ಕೂಡಲೇ ಬೀದಿ ನಾಯಿಗಳನ್ನು ಹಿಡಿಯಲು ಕಾರ್ಯಾಚರಣೆ ಹಮ್ಮಿಕೊಳ್ಳಬೇಕು  ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

ವರದಿ: ನಾಗಯ್ಯ 

SCROLL FOR NEXT