ರಾಜ್ಯ

ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ ಸಿಎಂ ತವರೂರು ಬೂಕನಕೆರೆ ಗ್ರಾಮ

Shilpa D

ಮೈಸೂರು: ಮುಖ್ಯಮಂತ್ರಿ ಅವರ ತವರೂರು ಬೂಕನಕೆರೆ  ಗ್ರಾಮಸ್ಥರು ಈ ಬಾರಿ ಬಜೆಟ್ ನಲ್ಲಿ ಬಿ.ಎಸ್ ಯಡಿಯೂರಪ್ಪ ತಮ್ಮ ಗ್ರಾಮಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಎಂಬ ಭರವಸೆಯಲ್ಲಿದ್ದಾರೆ. 

ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬೂಕನಕೆರೆ ಗ್ರಾಮಕ್ಕೆ ಹೆಚ್ಚಿನ ಸವಲತ್ತು ನೀಡಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಎಲ್ಲಾ ವಲಯಗಳ ಅಭಿವೃದ್ಧಿಗಾಗಿ ಬೂಕನಕೆರೆ ಕಾಯುತ್ತಿದೆ. 

ರಸ್ತೆಗಳ ನಿರ್ಮಾಣ, ಕೆರೆಗೆ ನೀರು ತುಂಬಿಸುವುದು ಮತ್ತು ಯಾತ್ರಿ ನಿವಾಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು  ಕೆಲಸಗಳು ಬಾಕಿ ಉಳಿದಿವೆ, ಜೊತೆಗೆ ಗ್ರಾಮಗಳಿಗೆ ಪೈಪ್ ಮೂಲಕ ನೀರು ಹಾಯಿಸುವುದು ಮುಖ್ಯವಾಗಿದೆ. ಯಡಿಯೂರಪ್ಪ ಈ ಹಿಂದೆ ಹಣಕಾಸು ಸಚಿವರಾಗಿದ್ದಾಗ  ಬಸ್ ನಿಲ್ದಾಣ, ಆಸ್ಪತ್ರೆ, ಸೇರಿದಂತೆ ಕೆಲವು ಸರ್ಕಾರಿ ಕಚೇರಿ ಮತ್ತು ದೇವಾಲಯಗಳ ಅಭಿವೃದ್ಧಿ ಮಾಡಿದ್ದರು, ಹೀಗಾಗಿ ಇಲ್ಲಿನ ಜನತೆ ಡ್ಯೂಟಿ ಡಾಕ್ಟರ್ ಮತ್ತು ಉತ್ತಮ ರಸ್ತೆಗಾಗಿ ಬೇಡಿಕೆಯಿಟ್ಟಿದ್ದಾರೆ.

ಈಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ, ಈ ಸಮಯದಲ್ಲಿ ನಮಗೆ ಉತ್ತಮ ಸೌಲಭ್ಯಗಳು ದೊರೆಯದಿದ್ದರೇ ಮುಂದೆಂದೂ ನಮಗೆ ಈ ಅಭಿವೃದ್ಧಿ ಸಿಗಲು ಸಾಧ್ಯವಿಲ್ಲ ಎಂದು ಗ್ರಾಮಸ್ಥ ಮಲ್ಲೇಶಪ್ಪ ಹೇಳಿದ್ದಾರೆ. ಜೊತೆಗೆ ಹಿಂದಿನ ಸರ್ಕಾರದ ತಾರತಮ್ಯ ಧೋರಣೆ ಬಗ್ಗ ಬೇಸರ ವ್ಯಕ್ತ ಪಡಿಸಿದ್ದಾರೆ.

ಇಲ್ಲಿ ನೀರಿಗೆ ಬೇರೆ ಮೂಲವಿಲ್ಲ, ಹೀಗಾಗಿ ಕೆರೆಗಳಿಗೆ ನೀರು ತುಂಬಿಸಬೇಕು, ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ರೈತರ 300 ಕೋಟಿ ರೂ.ಗಳನ್ನು ಉಳಿಸಲು ಸಹಾಯ ಮಾಡುವ ಮೈಸುಗರ್ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗಳಿಗೆ ಆಯೋಗ ನೇಕ ಮಾಡಬೇಕು ಎಂದು ರೈತ ನಾಯಕ ನಂಜುಂಡೆಗೌಡ ಆಗ್ರಹಿಸಿದ್ದಾರೆ.

ಯಡಿಯೂರಪ್ಪ ಅವರಿಗೆ ನಮ್ಮ ಗ್ರಾಮ ದೇವತೆ ಗೊಗುಲಮ್ಮ ಅವರ ಆಶೀರ್ವಾದವಿದೆ, ಹಿಗಾಗಿ ಅವರ ತಮ್ಮ ಸರ್ಕಾರದ ಸಂಪೂರ್ಣ ಅವಧಿಯನ್ನು ಪೂರೈಸುತ್ತಾರೆ ಎಂದು ಗ್ರಾಮಸ್ಥರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 

SCROLL FOR NEXT