ರಾಜ್ಯ

ಏರೋ ಇಂಡಿಯಾ ದಿನಾಂಕದ ಬಗ್ಗೆ ಸ್ಪಷ್ಟನೆ ಕೋರಿದ ಬಿಎಸ್ ಯಡಿಯೂರಪ್ಪ

Nagaraja AB

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ  ಮುಂದಿನ ಆವೃತ್ತಿಯನ್ನು ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ಇರುವ ಅನಿಶ್ಚಿತತೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ  ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಫೆಬ್ರವರಿ 2021 ರಲ್ಲಿ ನಡೆಯುವ ದ್ವೈವಾರ್ಷಿಕ ಕಾರ್ಯಕ್ರಮಕ್ಕೆ ದಿನಾಂಕಗಳನ್ನು ಮೊದಲೇ ನಿಗದಿಪಡಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ

ದಿನಾಂಕಗಳನ್ನು ಘೋಷಿಸುವುದರಿಂದ ಪೂರ್ವಭಾವಿ ಕಾರ್ಯಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ರಾಜನಾಥ್ ಸಿಂಗ್ ಅವರಿಗೆ ನೀಡಿರುವ  ಮನವಿ ಪತ್ರದಲ್ಲಿ ಯಡಿಯೂರಪ್ಪ ತಿಳಿಸಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಯಡಿಯೂರಪ್ಪ, ಈ ವಿಚಾರದ ಬಗ್ಗೆ ಚರ್ಚೆ ನಡೆಸಿದರು.

ದಿನಾಂಕಗಳ ಬಗ್ಗೆಗಿನ ಸಂವಹನದಿಂದ ಜಾಗತಿಕ ಮಟ್ಟದ ಏರೋಸ್ಪೆಸ್ ಉದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವುದು ಖಚಿತವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ರಾಜನಾಥ್ ಸಿಂಗ್ ತಿಳಿಸಿದ್ದಾರೆ. 

ಮೆಟ್ರೋ ರೈಲು ಯೋಜನೆಗಾಗಿ ಅಗತ್ಯವಿರುವ ರಕ್ಷಣಾ ಭೂಮಿಯನ್ನು ವರ್ಗಾಯಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ.  ಎಂಜಿ ರಸ್ತೆ ಮತ್ತು ವೆಲ್ಲಾರ ಜಂಕ್ಷನ್ ಬಳಿಯ ಎರಡು ನಿಲ್ದಾಣಗಳಲ್ಲಿ ರಕ್ಷಣಾ ಭೂಮಿ ವರ್ಗಾವಣೆ ರಕ್ಷಣಾ ಸಚಿವಾಲಯ 2019 ಫೆಬ್ರವರಿಯಲ್ಲಿಯೇ ಅನುಮತಿ ನೀಡಿದೆ. 

ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿರುವ ಮೂರನೇ ನಿಲ್ದಾಣಕ್ಕೆ ಕೆಲಸ ಮಾಡಲು ಅನುಮತಿ ಕೋರಲಾಗಿದ್ದು,  2018 ರಿಂದ ಅಧಿಕಾರಿಗಳ ಮಂಡಳಿಯ ಪರಿಗಣನೆಯಲ್ಲಿದೆ. ಮಂಡಳಿಯು ತನ್ನ ಶಿಫಾರಸುಗಳನ್ನು ಅಂತಿಮಗೊಳಿಸಿದೆ. 2020ರ ಜನವರಿ ತಿಂಗಳಲ್ಲಿ ಅದನ್ನು ಪ್ರಧಾನ  ಕಚೇರಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. 

SCROLL FOR NEXT