ರಾಜ್ಯ

ತ್ಯಾಜ್ಯ ಸುರಿದ ಮೆಟ್ರೋಗೆ ನೋಟಿಸ್: ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ

Manjula VN

ಬೆಂಗಳೂರು: ಆಡುಗೋಡಿಯಲ್ಲಿ ನಿಗೂಢ ಸ್ಫೋಟ ಪ್ರಕರಣದ ಘಟನಾ ಸ್ಥಳಕ್ಕೆ‌ ಸೋಮವಾರ ಬಿಬಿಎಂಪಿ ಮೇಯರ್ ಗೌತಮ್‌ ಕುಮಾರ್, ಆಯುಕ್ತ ಅನಿಲ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ತ್ಯಾಜ್ಯ ಸುರಿದಿರುವ ಮೆಟ್ರೋಗೆ ನೋಟಿಸ್ ನೀಡಿ ಹಾಗೂ ಸ್ಥಳ ಸ್ವಚ್ಛವಾಗಿಟ್ಟುಕೊಳ್ಳದ ಮನೆಗಳಿಗೆ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟದಲ್ಲಿ 60 ವರ್ಷದ ನರಸಿಂಹಯ್ಯ ಎಂಬುವವರ ಎಡಗಾಲು ಛಿದ್ರವಾಗಿತ್ತು. ಆದ್ದರಿಂದ ವೈದ್ಯರು ವ್ಯಕ್ತಿಯ ಕಾಲನ್ನು ಕಟ್ ಮಾಡಿದ್ದಾರೆ. ಸದ್ಯ ನರಸಿಂಹಯ್ಯ ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದರು.

ನರಸಿಂಹಯ್ಯ ಅವರ ಸಂಪೂರ್ಣ ವೆಚ್ಚವನ್ನು ಬಿಬಿಎಂಪಿಯೇ ಭರಸಲಿದೆ. ಸ್ಥಳದಲ್ಲಿ ಕಸ ಚೆಲ್ಲಿದ ಮನೆ ಮಾಲೀಕರಿಗೆ ದಂಡ ವಿಧಿಸಲಾಗುವುದು. ಅಲ್ಲದೇ, ತ್ಯಾಜ್ಯ ಸುರಿದಿರುವ ಮೆಟ್ರೋಗೆ ನೋಟಿಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

SCROLL FOR NEXT