ರಾಜ್ಯ

ರಾಜ್ಯಸಭೆಯಲ್ಲಿ ಖನಿಜ ಕಾನೂನುಗಳ (ತಿದ್ದುಪಡಿ) ಮಸೂದೆ-2020 ಅಂಗೀಕಾರ

Srinivas Rao BV

ನವದೆಹಲಿ: ವಾಣಿಜ್ಯ ಗಣಿಗಾರಿಕೆಗಾಗಿ ಎಲ್ಲಾ ದೇಶೀಯ ಮತ್ತು ಜಾಗತಿಕ ಕಂಪನಿಗಳಿಗೆ ಕಲ್ಲಿದ್ದಲು ಕ್ಷೇತ್ರವನ್ನು ಸಂಪೂರ್ಣ ಮುಕ್ತವಾಗಿಸುವ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಗುರುವಾರ ಮತಗಳ ವಿಭಜನೆಯೊಂದಿಗೆ ಅಂಗೀಕರಿಸಲಾಯಿತು. ಖನಿಜ ಕಾನೂನು (ತಿದ್ದುಪಡಿ) ಮಸೂದೆ-2020ನ್ನು ರಾಜ್ಯಸಭೆ ಅಂಗೀಕರಿಸಿದ್ದು, ಮಸೂದೆ ಪರವಾಗಿ 83 ಮತಗಳು ಮತ್ತು ವಿರುದ್ಧ 12 ಮತಗಳು ಬಿದ್ದಿವೆ. 

ಕಲ್ಲಿದ್ದಲು ಗಣಿ ಹರಾಜಿನಲ್ಲಿ ಭಾಗವಹಿಸಲು ಅಂತಿಮ ಬಳಕೆಯ ನಿರ್ಬಂಧಗಳನ್ನು ತೆಗೆದುಹಾಕುವ ಸುಗ್ರೀವಾಜ್ಞೆಯನ್ನು ಬದಲಿಸಲು ಮಸೂದೆಯು ಪ್ರಸ್ತಾಪಿಸಿದೆ. ಮತ್ತು ವಾಣಿಜ್ಯ ಗಣಿಗಾರಿಕೆಗಾಗಿ ಇದು ಎಲ್ಲಾ ದೇಶೀಯ ಮತ್ತು ಜಾಗತಿಕ ಕಂಪನಿಗಳಿಗೆ ಕಲ್ಲಿದ್ದಲು ವಲಯವನ್ನು ಸಂಪೂರ್ಣವಾಗಿ ಮುಕ್ತವಾಗಿರಿಸಲಿದೆ. ಈ ತಿಂಗಳು ಅವಧಿ ಮುಗಿಯು ಹಿನ್ನೆಲೆಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆಗಳನ್ನು ಹರಾಜು ಮಾಡಲು ಮಸೂದೆ ಅನುವು ಮಾಡಿಕೊಡಲಿದೆ. 

ಸುಗ್ರೀವಾಜ್ಞೆ ಅವಧಿ ಗುರುವಾರ ಕೊನೆಗೊಳ್ಳಬೇಕಿತ್ತು. ಮೇಲ್ಮನೆಯಲ್ಲಿ ಮಸೂದೆಯ ಕುರಿತ ಚರ್ಚೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಸೂದೆಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಮತ್ತು ಭಾರತೀಯ ಕಲ್ಲಿದ್ದಲು ಸಂಸ್ಥೆ(ಸಿಐಎಲ್) ಅನ್ನು ಬಲಪಡಿಸಲಾಗುವುದು  ಎಂದು ಹೇಳಿದರು.

ಈ ಮಸೂದೆಯನ್ನು ಈಗಾಗಲೇ ಮಾರ್ಚ್ 6 ರಂದು ಲೋಕಸಭೆ ಅಂಗೀಕರಿಸಿದೆ. ಮಸೂದೆಯ ಕುರಿತ ಚರ್ಚೆಯ ಸಂದರ್ಭದಲ್ಲಿ, ಸಿಪಿಐ ಮತ್ತು ಡಿಎಂಕೆ ಸೇರಿದಂತೆ ಪಕ್ಷಗಳು ವಿದೇಶಿ ನೇರ ಬಂಡವಾಳದ ಬಗ್ಗೆ ಕಳವಳ ವ್ಯಕ್ತಪಡಿಸಿ, ಇದು 'ಭಾರತ ವಿರೋಧಿ' ಮಸೂದೆ ಎಂದು ಟೀಕಿಸಿವೆ. ಸಿಪಿಎಂನ ಕರೀಮ್ ಮಸೂದೆ ಅಂಗೀಕಾರಕ್ಕೆ ಮತವಿಭಜನೆಗೆ ಮನವಿ ಮಾಡಿದರು. ಮಸೂದೆಯು ಪರವಾಗಿ 83 ಮತ್ತು ವಿರುದ್ಧ 12 ಮತಗಳನ್ನು ಪಡೆಯಿತು.

SCROLL FOR NEXT