ರಾಜ್ಯ

ಚಾಮರಾಜನಗರ: ಕೊರೋನಾ ಕುರಿತು ಸುಳ್ಳು ಸುದ್ದಿ ಪೋಸ್ಟ್ ,ಇಬ್ಬರು ಅರೆಸ್ಟ್

Raghavendra Adiga

ಚಾಮರಾಜನಗರ: ಮಾರಕ ಕೊರೋನಾ ಸಂಬಂಧಿಸಿದಂತೆ ಸಾಮಾಜಿಕ ಮಾದ್ಯಮಗಳಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡುತ್ತಿದ್ದ ಇಬ್ಬರನ್ನು ಚಾಮರಾಜನಗರ ಜಿಲ್ಲೆ ಪೋಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಕಾವುದವಾಡಿಯ ಲೋಕೇಶ್, ನಂಜನಗೂಡು ತಾಲೂಕಿನ ನೀಲಕಂಠ ನಗರದ ನಾಗೇಂದ್ರ  ಎಂಬುವವರನ್ನು ಬಂಧಿಸಲಾಗಿದೆ. ಇವರುಗಳು ಒಬ್ಬ ಯುವಕ ಹಾಗೂ ಓರ್ವ ಯುವತಿಗೆ ಕೊರೋನಾ ಇದೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು.

ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯ‌ ಮಹೇಶ್ ಹಾಗೂ ನಂಜನಗೂಡಿನ‌ ಸಹನಾ ಎನ್ನುವವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಸುದ್ದಿವಾಹಿನಿಯಲ್ಲಿ ತೋರಿಸಿದಂತೆ ಚಿತ್ರಗಳನ್ನು ರಚಿಸಿ ಪೋಸ್ಟ್ ಮಾಡಲಾಗಿತ್ತು. ಇದನ್ನು ಸಾಕಷ್ಟು ಜನ ಹಂಚಿಕೊಂಡು ವೈರಲ್ ಆಗಿಸಿದ್ದರು.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಸಿ.ರವಿ ಅವರ ಸೂಚನೆಯ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅವರುಗೆ ದೂರು ಸಲ್ಲಿಸಿದ ಕಾರಣ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವೈಯುಕ್ತಿಕ ಕಾರಣಕ್ಕಾಗಿ ಆರೋಪಿಗಳು ಇಂತಹಾ ಸುಳ್ಳು ಸುದ್ದಿ ಹರಡಿದ್ದಾರೆ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ. ಸಧ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT