ರಾಜ್ಯ

ಕೊರೋನಾ ಭೀತಿ: ವಿವಿಪುರಂ ಫುಡ್ ಸ್ಟ್ರೀಟ್ ಬಂದ್!

Srinivas Rao BV

ಬೆಂಗಳೂರು: ಎಲ್ಲೆಲ್ಲೂ ಕೊರೋನಾ ಭೀತಿ ಕಾಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದರಿಂದ ಜನನಿಬಿಡ ಪ್ರದೇಶಗಳೆಲ್ಲಾ ಸ್ತಬ್ಧಗೊಳ್ಳುತ್ತಿದೆ. ಈ ಸಾಲಿಗೆ ವಿವಿಪುರಂ ನ ಫುಡ್ ಸ್ಟ್ರೀಟ್ ಸೇರಿದೆ.
 
ಕೊರೋನಾ ಹಾಗೂ ಕಾಲರ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಬಿಎಂಪಿ ಮಾ.12 ರಂದು ವಿವಿಪುರಂ ಫುಡ್ ಸ್ಟ್ರೀಟ್ ನ್ನು ಮುಚ್ಚಿದೆ. 
  
ಸ್ಥಗಿತಗೊಳಿಸುವ ಆದೇಶ ಹೊರಡಿಸುವುದಕ್ಕೂ ಮುನ್ನ ಬಿಬಿಎಂಪಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವರದಿ ನೀಡಿದರು. ಈ ವರದಿಯನ್ನು ಆಧರಿಸಿ 1.5 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ವಾಣಿಜ್ಯ ಕಟ್ಟಡಗಳಲ್ಲಿ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಆದೇಶಿಸಲಾಗಿತ್ತು. ಆದರೆ ಈ ರೀತಿ ಮಾಡದವರಿಗೆ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ವಿವಿಪುರಂ ಕಾರ್ಪೊರೇಟರ್ ವಾಣಿ ವಿ ರಾವ್ ತಿಳಿಸಿದ್ದಾರೆ. 

SCROLL FOR NEXT