ಸುಧಾ ನಾರಾಯಣಮೂರ್ತಿ 
ರಾಜ್ಯ

ಕೊರೋನಾ ವೈರಸ್ ಹರಡದಂತೆ ತಡೆಯಲು ಮಾಲ್ ಗಳು, ಚಿತ್ರಮಂದಿರ ಮುಚ್ಚಿ: ಸರ್ಕಾರಕ್ಕೆ ಸುಧಾಮೂರ್ತಿ ಒತ್ತಾಯ

ಕೊರೋನಾ ವೈರಸ್ ಹರಡದಂತೆ ತಡೆಯಲು ಶಾಲಾ, ಕಾಲೇಜುಗಳು, ಮಾಲ್ ಗಳು, ಚಿತ್ರಮಂದಿರಗಳು ಹಾಗೂ ಎಲ್ಲಾ ಹವಾನಿಯಂತ್ರಿತ ಜಾಗಗಳನ್ನು ಬಂದ್ ಮಾಡುವಂತೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು: ಕೊರೋನಾ ವೈರಸ್ ಹರಡದಂತೆ ತಡೆಯಲು ಶಾಲಾ, ಕಾಲೇಜುಗಳು, ಮಾಲ್ ಗಳು, ಚಿತ್ರಮಂದಿರಗಳು ಹಾಗೂ ಎಲ್ಲಾ ಹವಾನಿಯಂತ್ರಿತ ಜಾಗಗಳನ್ನು ಬಂದ್ ಮಾಡುವಂತೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೋನಾ ವೈರಾಣು ಅಧಿಕ ಉಷ್ಣತೆಯಲ್ಲಿ ಸಾವನ್ನಪ್ಪುವುದು ವೈಜ್ಞಾನಿಕವಾಗಿ ಸಾಬೀತು ಆಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಆಸ್ಟ್ರೇಲಿಯಾದಲ್ಲಿ  ಗರಿಷ್ಠ ಬೇಸಿಗೆ ಮತ್ತು ಸಿಂಗಾಪುರದಲ್ಲಿ ಎಲ್ಲಾ 12 ತಿಂಗಳು ಬೇಸಿಗೆ ಇದೆ ಆದಾಗ್ಯೂ, ಗರಿಷ್ಠ ಉಷ್ಣಾಂಶದ ಹೊರತಾಗಿಯೂ ಅಲ್ಲಿಯೂ ಕೂಡಾ ಈ ಸೋಂಕು ಹರಡುತ್ತಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಸುಧಾಮೂರ್ತಿ ತಿಳಿಸಿದ್ದಾರೆ. 

ಪ್ರಸ್ತುತದಲ್ಲಿನ ಪರಿಸ್ಥಿತಿ ಕುರಿತಂತೆ ನಾರಾಯಣ ಹೆಲ್ತ್ ಮುಖ್ಯಸ್ಥ ದೇವಿ ಶೆಟ್ಟಿ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಕೊರೋನಾ ಸೋಂಕು ತೀವ್ರವಾಗಿ ಹರಡುವ ಮುನ್ನ ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಇಂತಹ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೆ ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳು ನಿರ್ವಹಣೆ ಮಾಡುವುದು ಕಷ್ಟ. ಅದಕ್ಕಾಗಿ ಇದೇ ಉದ್ದೇಶಕ್ಕಾಗಿ ಕನಿಷ್ಠ 500 ರಿಂದ 700 ಹಾಸಿಗೆಗಳ ಸಾಮರ್ಥ್ಯದ  ಸರ್ಕಾರಿ ಆಸ್ಪತ್ರೆಯೊಂದನ್ನು ತಮ್ಮಗೆ ನೀಡಿದರೆ  ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಜನರ ಕೆಲಸ ಮಾಡುವುದಾಗಿ ಅವರು ಮನವಿ ಮಾಡಿಕೊಂಡಿದ್ದಾರೆ.

ವೈದ್ಯಕೀಯ ಉಪಕರಣಗಳಂತಹ ಸಂಪನ್ಮೂಲಗಳನ್ನು ಒದಗಿಸಲು ಡಾ. ದೇವಿ ಶೆಟ್ಟಿ ಒಪ್ಪಿಗೆ ನೀಡಿದ್ದು,  ಸರ್ಕಾರದೊಂದಿಗೆ ಪೂರ್ವಭಾವಿಯಾಗಿ ಕೆಲಸ ಮಾಡಲು ಬಯಸುತ್ತೇವೆ . ಇದರಿಂದ ನಾವು ಕೊರೋನಾ ವೈರಾಣು ಬೇಗ ಹರಡಂತೆ  ತಡೆಯಬಹುದು.  ರಾಜ್ಯದ ಹಿತದೃಷ್ಟಿಯಿಂದ ಈ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಕಲಬುರಗಿಯಲ್ಲಿ 76 ವರ್ಷದ ವೃದ್ಧರೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿರುವುದು ಸೇರಿದಂತೆ ರಾಜ್ಯದಲ್ಲಿ ಒಟ್ಟಾರೇ ಆರು ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!