ರಾಜ್ಯ

ಮಧ್ಯಪ್ರದೇಶಕ್ಕೆ ಮರಳಿದ 7 ಬಂಡಾಯ ಕಾಂಗ್ರೆಸ್ ಶಾಸಕರು?

Manjula VN

ಬೆಂಗಳೂರು: ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿ ನಗರದಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಪಕ್ಷದ 7 ಬಂಡಾಯ ಶಾಸಕರು ಇದೀಗ ತಮ್ಮ ರಾಜ್ಯಕ್ಕೆ ಮರಳಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ವಿಶೇಷ ವಿಮಾನದ ಮೂಲಕ ಶಾಸಕರು ನಿನ್ನೆ ಸಂಜೆ ಮಧ್ಯಪ್ರದೇಶ ರಾಜ್ಯಕ್ಕೆ ತೆರಳಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಐವರು ಮಾಜಿ ಸಚಿವರು ಹಾಗೂ ಇಬ್ಬರು ಶಾಸಕರು ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಭೋಪಾಲ್'ಗೆ ತೆರಳಿದ್ದು, ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆಂದು ಹೇಳಲಾಗುತ್ತಿದೆ. 

ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಿಂಧಿಯಾ ಅವರಿಗೆ ಆತ್ಮೀಯರಾಗಿದ್ದ ಕಾಂಗ್ರೆಸ್ ಪಕ್ಷದ 19 ಶಾಸಕರೂ ಕೂಡ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಮಲ್ ನಾಥ್ ಸರ್ಕಾರವನ್ನು ಇಕ್ಕಟ್ಟಿಕೆ ಸಿಲುಕಿಸಿದ್ದರು. 

ಬಳಿಕ ಮಧ್ಯಪ್ರದೇಶ ಸ್ಪೀಕರ ನರ್ಮದಾ ಪ್ರಸಾದ್ ಪ್ರಜಾಪತಿಯವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿ, ತಮ್ಮ ಮುಂದೆ ಹಾಜರಾಗುವಂತೆ ಶಾಸಕರಿಗೆ ಸೂಚಿಸಿದ್ದರು. 

ಇನ್ನು ಮಧ್ಯಪ್ರದೇಶದ ಬಂಡಾಯ ಶಾಸಕರ ಚಟುವಟಿಕೆಗಳನ್ನು ರಾಜ್ಯ ಕಾಂಗ್ರೆಸ್ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದರಂತೆ ಶುಕ್ರವಾರ ಕಾಂಗ್ರೆಸ್ ಉನ್ನತ ನಾಯಕರು ಹಾಗೂ ಮಧ್ಯಪ್ರದೇಶದ ಹಿರಿಯ ನಾಯಕರು ನಗರದ ಪೊಲೀಸ್ ಅಧಿಕಾರಿಘಲನ್ನು ಭೇಟಿ ಮಾಡಿದ್ದು, ರೆಸಾರ್ಟ್ ನಲ್ಲಿರುವ ಬಂಡಾಯ ಶಾಸಕರ ಭೇಟಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು. 

SCROLL FOR NEXT