ರಾಜ್ಯ

ಕಲಬುರಗಿ: ಕರೋನಾದಿಂದ ಮೃತಪಟ್ಟ ಕುಟುಂಬದ ಮತ್ತೋರ್ವ ಸದಸ್ಯನಿಗೆ ಸೋಂಕು ದೃಢ

Vishwanath S

ಕಲಬುರಗಿ: ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ಕಲಬುರಗಿಯ ವೃದ್ಧನ ಕುಟುಂಬದ ಮತ್ತೋರ್ವ ಸದಸ್ಯನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7 ಕ್ಕೆ ಏರಿದೆ. ಈ ಪೈಕಿ ಕಲಬುರಗಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಉಳಿದವರಿಗೆ ವಿಶೇಷ ನಿಗಾ ಘಟಕದಲ್ಲಿ ಚಕಿತ್ಸೆ ನೀಡಲಾಗುತ್ತಿದೆ.

ಮೃತಪಟ್ಟ ಕುಟುಂಬದ 45 ವರ್ಷದ ವ್ಯಕ್ತಿಯ ಗಂಟಲು ದ್ರವ್ಯ ಮಾದರಿಯ ವರದಿ "ಪಾಸಿಟಿವ್" ಎಂದು ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್. ಬಿ ಅವರು ಸ್ಪಷ್ಟಪಡಿಸಿದ್ದಾರೆ.

ಮೃತ ವೃದ್ಧನ ಆರೈಕೆ ಹೆಚ್ಚಾಗಿ ಸಂಬಂಧಿಕ‌ ಮಾಡುತ್ತಿದ್ದ: ಡಾ.ಓಂ ಪ್ರಕಾಶ್ ಪಾಟೀಲ್ 
ಕೊರೊನಾ ಸೋಂಕಿನಿಂದ ಕಲಬುರಗಿ ಯಲ್ಲಿ ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಲ್ಲಿ ವೈರಸ್ ಇರುವುದು ಈಗಷ್ಟೇ ನಮಗೂ ತಿಳಿದು ಬಂದಿದೆ ಎಂದು ಆರೋಗ್ಯ ಕುಟುಂಬ ಇಲಾಖೆಯ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಮೃತ ಕುಟುಂಬದ ನಾಲ್ವರನ್ನು ಪರೀಕ್ಷೆಗೊಳಪಡಿಸಿ ಕಲಬುರಗಿಯ ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪರೀಕ್ಷೆ ಮಾಡಿದ ನಾಲ್ವರ ಪೈಕಿ ಮೂವರ ವರದಿ ನೆಗೆಟಿವ್ ಆಗಿ ಬಂದಿದ್ದು, ಸಂಬಂಧಿಕನೋರ್ವರ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ ಎಂದರು.

ವೃದ್ಧನ ಆರೈಕೆಯನ್ನು ಹೆಚ್ಚಾಗಿ ಅವರು ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಸೋಂಕು ತಗುಲಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು‌.

SCROLL FOR NEXT