ರಾಜ್ಯ

ಕೊರೋನಾ ಹಿನ್ನೆಲೆ:ಸಿಎಂ ಯಡಿಯೂರಪ್ಪ ಭೇಟಿಗೆ ಮಾರ್ಗಸೂಚಿ ಪಾಲಿಸಲು ಆದೇಶ

Raghavendra Adiga

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಮಾರ್ಗಸೂಚಿ ನೀಡಲಾಗಿದೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರರುವರು ಮತ್ತು ಮುಖ್ಯಮಂತ್ರಿಗಳ ನಿವಾಸದಲ್ಲಿ ಕೆಲಸ ಮಾಡವ ಸಿಬ್ಬಂದಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ.

ಡಾಲರ್ಸ್ ಕಾಲೋನಿಯ ಸಿಎಂ ನಿವಾಸ ಧವಳಗಿರಿ  ಗೃಹ ಕಚೇರಿ ಕೃಷ್ಣಾ ಹಾಗೂ ವಿಧಾನಸೌಧದ ಕಚೇರಿಯಲ್ಲಿ ಸಿಎಂ ಭೇಟಿ ಮಾಡಬೇಕಾದಲ್ಲಿ ಈ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ.

ಮುಖ್ಯಮಂತ್ರಿಗಳ ಭೇಟಿಗಿರುವ ಮಾರ್ಗಸೂಚಿ ನಿಯಮಾವಳಿಗಳು ಹೀಗಿದೆ-

  1. ಯಾವುದೇ ವ್ಯಕ್ತಿ, (ರಾಜಕೀಯ ವ್ಯಕ್ತಿ, ಪಕ್ಷದ ಕಾರ್ಯಕರ್ತ)ರಿಗೆ ಶೀತ, ಜ್ವರ ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ ಅವರಿಗೆ ಸಿಎಂ ಭೇಟಿ ಮಾಡಲು ಅವಕಾಶ ನೀಡಬಾರದು.
  2. ಮುಖ್ಯಮಂತ್ರಿಗಳ ನಿವಾಸದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಈ ಮೇಲಿನ ಯಾವುದೇ ಲಕ್ಷಣ ಕಂಡುಬಂದರೆ ಕೂಡಲೇ ರಜೆ ಮೇಲೆ ತೆರಳಲು ಅನುಮತಿ ನೀಡಿ ಅವರ ಸ್ಥಾನದಲ್ಲಿ ಬೇರೆ ಸಿಬ್ಬಂದಿಗಳ ನಿಯೋಜನೆ ಮಾಡುವುದು.
  3. ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಪ್ರವೇಶ ದ್ವಾರ ಮತ್ತು ಜನ ಸಂದಣೆ ಇರುವ ಕಡೆ ಇರಿಸುವುದು.
  4. ಮನೆಯೊಳಗೆ ಹೋಗುವ ಪ್ರತಿಯೊಬ್ಬರೂ ತಮ್ಮ ಕೈಗಳ್ಳನ್ನು ಹ್ಯಾಂಡ್ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿದ ಬಳಿಕ ಒಳಗೆ ಪ್ರವೇಶಿಸಬೇಕು. 
  5. ಮನೆಯೊಳಗೆ ಹೆಚ್ಚು ಜನಸಂದಣಿ ಆಗದಂತೆ ನೋಡಿಕೊಳ್ಳುವುದು.
  6.  ಭೇಟಿ ಅನಿವಾರ್ಯ ಆದಲ್ಲಿ ಒಬ್ಬೊಬ್ಬರಿಗೆ ಮಾತ್ರ ಅವಕಾಶ ಮಾಡಿಕೊಡುವುದು.
  7. ಮನೆ ಫ್ಲೋರ್ ಗಳನ್ನು ಆಗಿಂದಾಗ್ಗೆ ಡಿಟರ್ಜೆಂಟ್ ನಿಂದ ಸ್ವಚ್ಛಗೊಳಿಸುವುದು.
  8. ಮನೆ ಪೀಠೋಪಕರಣಗಳನ್ನು ಆಗಿಂದಾಗಲೇ ಶೇ.1 ಸೋಡಿಯಂ ಹೈಪೋಕ್ಲೋರೈಡ್ ನಿಂದ ಸ್ವಚ್ಛಗೊಳಿಸುವುದು.
  9. ಯಾವುದೇ ವಿದೇಶದ ಡೆಲಿಗೇಟ್ಸ್ ಬಂದ್ರು ಅವರು ಮಾಸ್ಕ್ ಧರಿಸಿದ ನಂತರವೇ ಸಿಎಂ ಭೇಟಿಗೆ ಅವಕಾಶ ನೀಡುವುದು.
  10. ಯಾವುದೇ ವ್ಯಕ್ತಿ ಸೀನುವಾಗ, ಕೆಮ್ಮುವಾಗ ಮೂಗು ಹಾಗೂ ಬಾಯಿಯನ್ನು ಟಿಶ್ಯೂ ಪೇಪರ್ ಅಥವಾ ಕರವಸ್ತ್ರದಿಂದ ಮುಚ್ಚಿಕೊಳ್ಲಲು ಸಲಹೆ ನೀಡುವುದು.
SCROLL FOR NEXT