ರಾಜ್ಯ

ಕೋವಿಡ್-19ನಿಂದ ಸಂಸತ್ ಅಧಿವೇಶನ ಮೊಟಕಾಗುವುದಿಲ್ಲ: ಪ್ರಹ್ಲಾದ್ ಜೋಶಿ

Raghavendra Adiga

ಬೆಂಗಳೂರು: "ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದರಿಂದ ಕೊರೋನಾವೈರಸ್ ಹಿನ್ನೆಲೆಯಿಂದ ಲೋಕಸಭೆ, ರಾಜ್ಯಸಭೆ ಕಲಾಪಗಳು ಮುಂದೂಡಿಕೆಯಾಗುವುದಿಲ್ಲ ಅಥವಾ ರದ್ದಾಗುವುದಿಲ್ಲ ಆದರೆ ಸಂಸತ್ತಿನ ಆವರಣದೊಳಗೆ ಸಾಮಾನ್ಯ ಸಂದರ್ಶಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ"ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು

ವಿಧಾನಸಭಾ ಅಧಿವೇಶನ ನಡೆಯುವ ವಿಧಾನಸೌಧದಲ್ಲಿ , ಸಂಸತ್ತಿನಲ್ಲಿ ತೆಗೆದುಕೊಳ್ಳುವ ವಿಧಾನಗಳನ್ನು ಅನುಸರಿಸಲಾಗುತ್ತದೆ. ಜನವರಿ 31 ರಂದು ಪ್ರಾರಂಭವಾದ ಸಂಸತ್ತಿನ ಬಜೆಟ್ ಅಧಿವೇಶನ ಮುಂದುವರಿಯಲಿದ್ದು, ವೇಳಾಪಟ್ಟಿಯಂತೆ ಏಪ್ರಿಲ್ 3 ರಂದು ಕೊನೆಗೊಳ್ಳಲಿದೆ ಎಂದು ಜೋಶಿ ಹೇಳಿದರು, “ಲೋಕಸಭೆ ಮತ್ತು ರಾಜ್ಯಸಭಾ ಆವರಣವನ್ನು ಸ್ವಚ್ಚಗೊಳಿಸಲು ನಾವು ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಅವರು ಪ್ರತಿದಿನ ಎರಡು ಬಾರಿ ಟೇಬಲ್‌ಗಳು, ಕುರ್ಚಿಗಳು ಮತ್ತು ಬಾಗಿಲುಗಳನ್ನುಶುಚಿಗೊಳಿಸುತ್ತಾರೆ,ಸದಸ್ಯರು ಮತ್ತು ಅಧಿಕಾರಿಗಳಿಗೆ ಬಳಸಲು ನಾವು ಹಲವಾರು ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಇರಿಸಿದ್ದೇವೆ. "

ಮಾರಕ ಕೊರೋನಾವೈರಸ್ ತಡೆಗಾಗಿ ಭಾರತವು ತೆಗೆದುಕೊಂಡಿರುವ ಕ್ರಮ ಉತ್ತಮವಾಗಿದೆ. ಎಂದಿರುವ ಜೋಶಿ  "2019 ರ ಡಿಸೆಂಬರ್‌ನಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡಾಗ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದರು ಮತ್ತು ಅಂದಿನಿಂದ ಇಂದಿನವರೆಗೆ ನಾವು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಅವರು ಹೇಳಿದರು. ಸಂಸತ್ತಿನಲ್ಲಿ, ಉಭಯ ಸದನಗಳ ಕುರ್ಚಿಗಳು ಸಾಮಾನ್ಯ ಸಂದರ್ಶಕರ ಪ್ರವೇಶವನ್ನು ನಿರ್ಬಂಧಿಸಿವೆ. "ಅವರ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗಿದೆ. ಇದು ನಮ್ಮ ಮುನ್ನೆಚ್ಚರಿಕೆ ಕ್ರಮದ ಒಂದು ಭಾಗವಾಗಿದೆ, ’’ ಎಂದರು. ಇದೀಗ ವಿಧಾನಸೌಧದಲ್ಲಿ ಕೂಡ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದೇ ಎಂದು ಕೇಳಿದಾಗ, ಅಧಿಕಾರಿಗಳು ಮತ್ತು ಇತರರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರು ಹೇಳಿದರು. ಆದರೆ, ಸಾಮಾನ್ಯ ಸಂದರ್ಶಕರ ಸಂಖ್ಯೆಯನ್ನು ಮಿತಿಗೊಳಿಸುವುದು ಉತ್ತಮ ಕ್ರಮ ಎಂದು ಅಭಿಪ್ರಾಯಪಟ್ಟರು. 

ನಾನು ಇದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತರರೊಡನೆ ಚರ್ಚಿಸುತ್ತೇನೆ. ನಾವು ಸಾರ್ವಜನಿಕರನ್ನು ನಿರ್ಬಂಧಿಸಬೇಕು,  ಎಂದು ವಿಧಾನಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.ವಿಧಾನಸಭೆ ಅಧಿವೇಶನದ ಅವಧಿಯನ್ನು ಕಡಿಮೆ ಮಾಡಲಾಗುತ್ತದೆಯೇ ಎಂದು ಕೇಳಿದಾಗ, ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ಹೇಳಿದರು. "ಮುಂದಿನ ದಿನಗಳಲ್ಲಿ ಅಂತಹ ಯಾವುದೇ ಬೇಡಿಕೆ ಇದೆಯೇ ಎಂದು ನಾವು ಗಮನಿಸುವವರಿದ್ದೇವೆ. ಇಂದಿನ (ಶನಿವಾರ) ವೇಳೆಗೆ ಅಧಿವೇಶನ ವೇಳಾಪಟ್ಟಿಯಂತೆ ಮಾರ್ಚ್ 31 ರವರೆಗೆ ನಡೆಯಲಿದೆ, ’’ ಎಂದರು.

SCROLL FOR NEXT