ಬಾಗಲಕೋಟೆ: ಭೀಕರ ಅಪಘಾತ, ಲಾರಿಯಡಿ ಸಿಕ್ಕು ಮೂವರು ದಾರುಣ ಸಾವು 
ರಾಜ್ಯ

ಬಾಗಲಕೋಟೆ: ಭೀಕರ ಅಪಘಾತ, ಲಾರಿಯಡಿ ಸಿಕ್ಕು ಮೂವರು ದಾರುಣ ಸಾವು

ರಸ್ತೆ ಬದಿಯ ಪಾನ್ ಶಾಪ್ ಮುಂದೆ ನಿಂತವರ ಮೇಲೆ ಲಾರಿಯೊಂದು ನಿಗ್ಗಿದ ಪರಿಣಾಮ ಲಾರಿಗೆ ಸಿಕ್ಕು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆ  ಬಾದಾಮಿ ತಾಲೂಕಿನ ಕೆರೂರಿನ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 

ಬಾಗಲಕೋಟೆ: ರಸ್ತೆ ಬದಿಯ ಪಾನ್ ಶಾಪ್ ಮುಂದೆ ನಿಂತವರ ಮೇಲೆ ಲಾರಿಯೊಂದು ನಿಗ್ಗಿದ ಪರಿಣಾಮ ಲಾರಿಗೆ ಸಿಕ್ಕು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆ  ಬಾದಾಮಿ ತಾಲೂಕಿನ ಕೆರೂರಿನ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಮಹಾನಂದ ಕರಿ(೧೬) ಸುರೇಬಾನ, ಲಕ್ಷö್ಮಣ ವಿಠ್ಠಲ ಸಾವಜಿ(೩೫) ಕೆರೂರ, ಪೂಜಾರ ಅರ್ಜುನ ಹಳಪೇಟೆ( ೨೨) ನರಗುಂದ ಎಂದು ಗುರುತಿಸಲಾಗಿದೆ. ಮಂಜುಳಾ ಜವಳಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಅತಿಯಾದ ವೇಗದಿಂದ ಕೂಡಿದ್ದು ಚಾಲಕನ ನಿಯಂತ್ರಣ ತಪ್ಪಿದೆ ಈ ವೇಳೆ ಲಾರಿ ರಸ್ತೆಯ ಬದಿಗಿದ್ದ ಪಾನ್ ಶಾಪ್ ನತ್ತ ನುಗ್ಗಿ ಅಲ್ಲಿ ಚಹಾ ಸೇವಿಸುತ್ತಿದ್ದವರಿಗೆ ಗುದ್ದಿದೆ. ಪರಿಣಾಮ ಮೂವರು ಸಾವನ್ನಪ್ಪಿ ಇನ್ನೂ 
 ಆರು ಮಂದಿ ಗಾಯಗೊಂಡಿದ್ದಾರೆ. 

ಘಟನೆ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ